ಚಿಕ್ಕಬಳ್ಳಾಪುರ :ಅಕ್ಕನ ಸಂಸಾರ ಸುಖವಾಗಿರಲಿ ಎಂದು ಬಾವನ ಅನೈತಿಕ ಸಂಬಂಧ ಪ್ರಶ್ನಿಸಿದ ಹಿನ್ನೆಲೆ ಬಾವನೇ ಬಾಮೈದನನ್ನು ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಇಮ್ರಾನ್ ಖಾನ್ (25) ಕೊಲೆಯಾದ ಯುವಕ, ಬಾವ ಸಾಧಿಕ್ ಪಾಷಾ@ಚಾಂದ್, ಟಿಪ್ಪು, ಸಮಿವುಲ್ಲಾ, ಸಯ್ಯದ್ ಕೊಲೆ ಮಾಡಿರುವ ಆರೋಪಿಗಳು.
ಕಳೆದ 5 ವರ್ಷಗಳ ಹಿಂದೆ ರುಕ್ಸಾನಾ ಎಂಬಾಕೆಯನ್ನು ಚಾಂದ್ ಪಾಷಾ ಮದವೆಯಾಗಿದ್ದ ನಂತರ ಮುಮ್ತಾಜ್ನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ತಿಳಿದ ಇಮ್ರನ್ ಖಾನ್ ಸಾಕಷ್ಟು ಬಾರಿ ಚಾಂದ್ ಪಾಷಾ ಜೊತೆಗೆ ಜಗಳ ಮಾಡಿದ್ದ. ಇತ್ತೀಚೆಗೆ ಇದೇ ವಿಚಾರವಾಗಿ ಬಾವನ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ್ದ.
ಅಕ್ಕನ ಸುಖ ಸಂಸಾರಕ್ಕಾಗಿ ಜಗಳವಾಡಿ ಬಾವನಿಂದಲೇ ಹತ್ಯೆಯಾದ ಬಾಮೈದ ಇದರಿಂದ ಕುಪಿತಗೊಂಡ ಚಾಂದ್ ಪಾಷಾ ಸೇಡಿಗೆ ಸೇಡು ತೀರಿಸಿಕೊಳ್ಳಲು ಬಾಮೈದನ ಕೊಲೆಗೆ ತನ್ನ ಸ್ನೇಹಿತರೊಂದಿಗೆ ಪ್ಲಾನ್ ರೂಪಿಸಿದ್ದ. ಅದರಂತೆ ಜನವರಿ 3ನೇ ತಾರೀಖು ಆಂಧ್ರಪ್ರದೇಶದ ಹಿಂದೂಪುರ ಮೂಲದ ಲಾರಿ ಚಾಲಕರಿಂದ ಕೊಲೆ ಮಾಡಿಸಿ ಎಸ್ಕೇಪ್ ಆಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೌರಿಬಿದನೂರು ಪೊಲೀಸರು, ನಾಲ್ಕೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
2ನೇ ಹೆಂಡತಿಯಿಂದ ಆರೋಪಿಗಳ ಪತ್ತೆ :ಕೊಲೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳ ಬೆನ್ನು ಹತ್ತಿದ್ದ ಪೊಲೀಸರು, ಚಾಂದ್ ಪಾಷಾ 2ನೇ ಹೆಂಡತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿಗಳ ಕುರಿತು ಮುಮ್ತಾಜ್ ಬಾಯಿ ಬಿಟ್ಟಿದ್ದಾಳೆ.
ಗೌರಿಬಿದನೂರು ವೃತ್ತ ನಿರೀಕ್ಷಕ ಎಸ್.ರವಿ ಹಾಗೂ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.