ಚಿಕ್ಕಬಳ್ಳಾಪುರ:ಯುವ ಜೋಡಿಗಳ ಪ್ರೇಮದ ಕಾರಣಕ್ಕೆ ಯುವಕನ ಮೇಲೆ ಯುವತಿಯ ಅಣ್ಣ ಹಾಗೂ ಸ್ನೇಹಿತರು ಮಚ್ಚು ಬೀಸಿ ಗಂಭೀರ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಕುಡಮಲಕುಂಟೆ ಇಂಡಸ್ಟ್ರೀಯಲ್ ಏರಿಯಾ ಬಳಿ ನಡೆದಿದೆ.
'ಪ್ರೀತಿಯ ಮಾತುಕತೆ' ಅಂತಾ ಮನೆಗೆ ಕರೆದು ಯುವಕನ ಮೇಲೆ ಮಚ್ಚು ಬೀಸಿದ ಯುವತಿಯ ಅಣ್ಣ! - chikkaballapura crime news
ತನ್ನ ತಂಗಿಯನ್ನು ಪ್ರೀತಿಸುತ್ತಿದ್ದ ಯುವಕನನ್ನು ಮನೆಗೆ ಕರೆದು ಆತನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಗೌರಿಬಿದನೂರು ತಾಲೂಕಿನ ಕುಡಮಲಕುಂಟೆ ಇಂಡಸ್ಟ್ರೀಯಲ್ ಏರಿಯಾ ಬಳಿ ನಡೆದಿದೆ.
!['ಪ್ರೀತಿಯ ಮಾತುಕತೆ' ಅಂತಾ ಮನೆಗೆ ಕರೆದು ಯುವಕನ ಮೇಲೆ ಮಚ್ಚು ಬೀಸಿದ ಯುವತಿಯ ಅಣ್ಣ! Ashok](https://etvbharatimages.akamaized.net/etvbharat/prod-images/768-512-5493279-thumbnail-3x2-chai.jpg)
ಆಂಧ್ರ ಪ್ರದೇಶದ ಹಿಂದುಪುರದ ನಿವಾಸಿ ಅಶೋಕ್(17) ಹಾಗೂ ಗೌರಿಬಿದನೂರು ತಾಲೂಕಿನ ಕಾಲೇಜೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ಯುವತಿ ನಡುವೆ ಪ್ರೀತಿ ಬೆಳೆದಿದ್ದು, ಪೋಷಕರ ಗಮನಕ್ಕೆ ತರಲಾಗಿತ್ತು. ಇನ್ನು ಮಾತುಕತೆ ನಡೆಸುವುದಾಗಿ ಮನೆಗೆ ಕರೆದು ಯುವತಿ ಅಣ್ಣ ಹಾಗೂ ಸ್ನೇಹಿತರು ಯುವಕನನ್ನು ಕುಡಮಲಕುಂಟೆ ಇಂಡಸ್ಟ್ರೀಯಲ್ ಏರಿಯಾ ಬಳಿ ಮಚ್ಚು ಬೀಸಿದ್ದಾರೆ ಎನ್ನಲಾಗಿದೆ.
ಸದ್ಯ ಅಶೋಕ್ ಸಂಭಂದಿಕರು ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ. ಸದ್ಯ ಅಶೋಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.