ಚಿಕ್ಕಬಳ್ಳಾಪುರ :ಜಿಲ್ಲೆಯ ಗುಡಿಬಂಡೆ ಪಟ್ಟಣದ ನೀರಿನ ಟ್ಯಾಂಕರ್ನಲ್ಲಿ ಕೋತಿಗಳು ಬಿದ್ದು ಸಾವನ್ನಪ್ಪಿದ್ದರೂ ಸಹ ನಗರಪಾಲಿಕೆ ಮಾತ್ರ ಅದನ್ನ ಸ್ವಚ್ಛಗೊಳಿಸದೆ ದುರ್ವಾಸನೆ ಬರುತ್ತಿರುವ ನೀರನ್ನೇ ನಗರಕ್ಕೆ ಪೂರೈಸುತ್ತಿದೆ.
ಎಂಥಾ ಕರ್ಮ ಈ ಜನರದ್ದು.. ಕುಡಿಯೋಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು.. - ಚಿಕ್ಕಬಳ್ಳಾಪುರ ಗುಡಿಬಂಡೆ ನೀರಿನ ಸಮಸ್ಯೆ ಸುದ್ದಿ
ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರು ಸಂಗ್ರಾಹಕ ಓವರ್ ಹೆಡ್ ಟ್ಯಾಂಕ್‌ನಲ್ಲಿ ಕೋತಿಗಳು ಬಿದ್ದು ಕೆಲವು ತಿಂಗಳಾದ್ರೂ ಸಹ ಸ್ವಚ್ಛತೆ ಮಾಡದೇ ಅದೇ ನೀರನ್ನು ಗುಡಿಬಂಡೆ ಪಟ್ಟಣದ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಗುಡಿಬಂಡೆ ಪಟ್ಟಣಕ್ಕೆ ಕೋತಿಗಳ ದೇಹ ಕೊಳೆತು ನಾರುತ್ತಿರುವ ನೀರು
ಗುಡಿಬಂಡೆ ಪಟ್ಟಣದ ನೀರು ಸಂಗ್ರಾಹಕ ಓವರ್ ಹೆಡ್ ಟ್ಯಾಂಕ್‌ನಲ್ಲಿ ಕೋತಿಗಳು ಬಿದ್ದು ಕೆಲ ತಿಂಗಳಾದ್ರೂ ಸಹ ಅದನ್ನ ಸ್ವಚ್ಛಗೊಳಿಸದೇ ಅದೇ ನೀರನ್ನು ಗುಡಿಬಂಡೆ ಪಟ್ಟಣದ ವಾರ್ಡ್‌ಗಳಿಗೆ ಸರಬರಾಜು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಸುಮಾರು ವರ್ಷಗಳಿಂದ ಓವರ್ ಹೆಡ್ ಟ್ಯಾಂಕ್ ಸ್ವಚ್ಛ ಮಾಡಿಲ್ಲ. ಈಗ ಕೋತಿಗಳು ಅದರೊಳಗೆ ಬಿದ್ದು ಸಾವನ್ನಪ್ಪಿದ್ದರೂ ಸಹ ಅದನ್ನ ಗಮನಹರಿಸದೆ, ಅದೇ ನೀರನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.