ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಇಂದು 67 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು 118 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು 67 ಪಾಸಿಟಿವ್ ಕೇಸ್ ದೃಢ; 118 ಸೋಂಕಿತರ ಬಿಡುಗಡೆ - Number of infected persons
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯಾ ಪ್ರಮಾಣಕ್ಕಿಂತ ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಇಂದು 67 ಪಾಸಿಟಿವ್ ಪ್ರಕರಣಗಳು ದೃಢಪಟ್ಟರೆ 118 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾದರು.
ಚಿಕ್ಕಬಳ್ಳಾಪುರ 40, ಚಿಂತಾಮಣಿ 5, ಗೌರಿಬಿದನೂರು 2, ಬಾಗೇಪಲ್ಲಿ 3, ಗುಡಿಬಂಡೆ 8 ಹಾಗೂ ಶಿಡ್ಲಘಟ್ಟದಲ್ಲಿ 9 ಪ್ರಕರಣಗಳು ಸೇರಿದಂತೆ ಒಟ್ಟು ಇಂದು 67 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಈ ಮೂಲಕ ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 5137ಕ್ಕೆ ಏರಿಕೆಯಾಗಿದೆ.
ಅದೇ ರೀತಿ ಚಿಂತಾಮಣಿ 5, ಚಿಕ್ಕಬಳ್ಳಾಪುರ 48, ಬಾಗೇಪಲ್ಲಿ 19, ಶಿಡ್ಲಘಟ್ಟ 17, ಗೌರಿಬಿದನೂರು 27 ಹಾಗೂ ಗುಡಿಬಂಡೆ ವ್ಯಾಪ್ತಿಯಲ್ಲಿ 2 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಒಟ್ಟು ಗುಣಮುಖಗೊಂಡವರ ಸಂಖ್ಯೆ 4117ಕ್ಕೆ ಏರಿಕೆಯಾಗಿದೆ. ಸದ್ಯ 950 ಸಕ್ರಿಯ ಸೋಂಕಿತರಿಗೆ ಜಿಲ್ಲೆಯ ಐಸೋಲೇಷನ್ ಸೇರಿದಂತೆ ತಾಲೂಕಿನ ಕೊವೀಡ್ ಕೇರ್ ಸೆಂಟರ್, ಹೋಂ ಐಸೋಲೇಷನ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.