ಕರ್ನಾಟಕ

karnataka

ETV Bharat / state

ಮುಂಜಾಗ್ರತಾ ಕ್ರಮಕೈಗೊಳ್ಳದ ಅಂಗಡಿ ಮಾಲೀಕರ ವಿರುದ್ಧ ಚಿಕ್ಕಬಳ್ಳಾಪುರ ಡಿಸಿ ಗರಂ - ಚಿಕ್ಕಬಳ್ಳಾಪುರ ಕೊರೊನಾ

ಚಿಕ್ಕಬಳ್ಳಾಪುರದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ, ಅಂಗಡಿ ತೆರೆದ ಮಾಲೀಕರನ್ನು ಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಂಗಡಿ ಮಾಲೀಕರ ವಿರುದ್ಧ ಚಿಕ್ಕಬಳ್ಳಾಪುರ ಡಿಸಿ ಗರಂ
ಅಂಗಡಿ ಮಾಲೀಕರ ವಿರುದ್ಧ ಚಿಕ್ಕಬಳ್ಳಾಪುರ ಡಿಸಿ ಗರಂ

By

Published : Aug 26, 2020, 9:58 AM IST

Updated : Aug 26, 2020, 11:42 AM IST

ಚಿಕ್ಕಬಳ್ಳಾಪುರ:ಕೊರೊನಾ ಮುನ್ನೆಚ್ಚರಿಕೆ ಕ್ರಮಗಳನ್ನು ಉಲ್ಲಂಘಿಸಿ ಹೋಟೆಲ್ ನಡೆಸುತ್ತಿರುವ ಅಂಗಡಿ ಮಾಲೀಕರನ್ನು ಜಿಲ್ಲಾಧಿಕಾರಿ ಬೆಳ್ಳಂಬೆಳಗ್ಗೆ ತರಾಟೆಗೆ ತೆಗೆದುಕೊಂಡಿದ್ದು, ಅಂಗಡಿ ಮುಚ್ಚುವಂತೆ ಸೂಚನೆ ನೀಡಿದ್ದಾರೆ.

ಕಳೆದ ವಾರವಷ್ಟೇ ನಗರದ ಕೆಲವು ವಾರ್ಡ್‌ಗಳಿಗೆ ಭೇಟಿ‌ ನೀಡಿದ್ದ ಜಿಲ್ಲಾಧಿಕಾರಿ ಆರ್.ಲತಾ ಸ್ವಚ್ಛತೆ ಸೇರಿದಂತೆ ಸಾರ್ವಜನಿಕರಿಗೆ ಕೊರೊನಾ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಿಳಿ ಹೇಳಿದ್ದರು. ಇಂದು ಮತ್ತೆ ಫೀಲ್ಡ್​ಗಿಳಿದ ಅವರು, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸದ ಹೋಟೆಲ್, ಅಂಗಡಿಗಳ‌ ಬಾಗಿಲು ಮುಚ್ಚಿಸಿದ್ದಾರೆ. ಅಷ್ಟೇ ಅಲ್ಲದೆ, ಕೊರೊನಾ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳದಿದ್ದರೆ, ಅಂಗಡಿಗಳನ್ನು ಸೀಜ್​ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.

ವಾರ್ಡ್ 11 ಸೇರಿದಂತೆ ನಗರದ ಕೆಲ ಭಾಗಗಳಿಗೆ ಭೇಟಿ ನೀಡಿದ ಅವರು, ಸ್ವಚ್ಚತೆಯ ಕುರಿತು ತಿಳಿಹೇಳಿದರು.

Last Updated : Aug 26, 2020, 11:42 AM IST

ABOUT THE AUTHOR

...view details