ಚಿಕ್ಕಬಳಾಪುರ:ಜಿಲ್ಲೆಯಲ್ಲಿ ಇಂದು 15 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು 13 ಸೋಂಕಿತರು ಸಂಪೂರ್ಣ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 15 ಪಾಸಿಟಿವ್ ಕೇಸ್: 13 ಜನ ಗುಣಮುಖ - Positive cases in Chikkaballapura
ಚಿಕ್ಕಬಳಾಪುರ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ...
ಚಿಕ್ಕಬಳಾಪುರ ಜಿಲ್ಲೆಯ ಇಂದಿನ ಕೊರೊನಾ ಅಂಕಿ-ಅಂಶ ಹೀಗಿದೆ...
ಚಿಕ್ಕಬಳ್ಳಾಪುರದಲ್ಲಿ 9, ಶಿಡ್ಲಘಟ್ಟದಲ್ಲಿ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಉಳಿದ ತಾಲೂಕು ವ್ಯಾಪ್ತಿಗಳಲ್ಲಿ ಶೂನ್ಯ ಸಂಖ್ಯೆ ಕಾಣಿಸಿಕೊಂಡಿದೆ. ಇದು ಜಿಲ್ಲೆಯ ಜನತೆಯಲ್ಲಿ ಕೊಂಚ ನೆಮ್ಮದಿಯನ್ನು ತಂದಿದ್ದು ಒಟ್ಟು ಸೋಂಕಿತರ ಸಂಖ್ಯೆ 6,863ಕ್ಕೆ ಏರಿಕೆಯಾಗಿದೆ. ಇನ್ನು ಚಿಕ್ಕಬಳ್ಳಾಪುರದ 11 ಹಾಗೂ ಗೌರಿಬಿದನೂರಿನಲ್ಲಿ ಇಬ್ಬರು ಸೋಂಕಿತರು ಸಂಪೂರ್ಣ ಗುಣಮುಖಗೊಂಡಿದ್ದಾರೆ. ಒಟ್ಟು ಗುಣಮುಖಗೊಂಡವರ ಸಂಖ್ಯೆ 5,713ಕ್ಕೆ ಏರಿಕೆಯಾಗಿದೆ.