ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದಾರುಣ ಸಾವು - ಬೆಸಿಗೆರಜೆಯಲ್ಲಿ ಆಡಲು ಹೊದ ಮಕ್ಕಳ ಮರಣ

ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಬಂದಿದ್ದ ಬಾಲಕರು ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿ ಮುಳುಗಿ ಮರಣ ಹೊಂದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Chikkaballapur Three boys death drowned in farm pits
ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರ ದಾರುಣ ಸಾವು

By

Published : May 1, 2022, 3:55 PM IST

ಚಿಕ್ಕಬಳ್ಳಾಪುರ:ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಬಾಲಕರು ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ‌ ಹಂಪಸಂದ್ರ ಬಳಿ ನಡೆದಿದೆ. ಮೃತ ಬಾಲಕರನ್ನು ಹಂಪಸಂದ್ರ ಗ್ರಾಮದ ಲಿಖಿತ್ (16), ಮನೋಜ್ (15) ಹಾಗೂ ರಾಜೇಶ್ (16) ಎಂದು ಗುರುತಿಸಲಾಗಿದೆ.

ಬೇಸಿಗೆ ರಜೆಯ ಹಿನ್ನೆಲೆ ಬೆಂಗಳೂರಿನ ಮನೋಜ್ ಹಂಪಸಂದ್ರದ ಅಜ್ಜಿ ಮನೆಗೆ ಬಂದಿದ್ದಾನೆ. ನೀರಿನಲ್ಲಿ ಆಟವಾಡಲು ಗ್ರಾಮದ ಜಯಮ್ಮ ಎಂಬುವರ ತೋಟದ ಕೃಷಿ ಹೊಂಡಕ್ಕೆ ತೆರಳಿದ್ದಾರೆ. ಆಟಕ್ಕೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಉಳಿದ ಮೂವರು ಬಾಲಕರು ಪ್ರಾಣಾಪಾಯದಿಂದ ಪಾರಾಗಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.

ಬೆಸಿಗೆರಜೆಯಲ್ಲಿ ಆಡಲು ಹೊದ ಮಕ್ಕಳ ಮರಣ

ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರೂ ಮೃತದೇಹಗಳು ಸಿಗದ ಹಿನ್ನೆಲೆ ಜೆಸಿಬಿ ಮೂಲಕ ಕೃಷಿ ಹೊಂಡವನ್ನು ಒಡೆದು ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಸದ್ಯ ಸ್ಥಳದಲ್ಲಿ ಪೋಷಕರ ಅಳಲು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗೌರಿಬಿದನೂರು ಸರ್ಕಲ್ ಇನ್ಸ್‌ಪೆಕ್ಟರ್ ಶಶಿಧರ್ ಹಾಗೂ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ವಿಜಯ್ ಕುಮಾರ್​ ಮತ್ತು ಲಲಿತಮ್ಮ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಉಪ್ಪಿನಂಗಡಿಯಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ: ಟ್ವೀಟ್ ಮೂಲಕ ಸಿದ್ದರಾಮಯ್ಯ ಕಿಡಿ

ABOUT THE AUTHOR

...view details