ಕರ್ನಾಟಕ

karnataka

ETV Bharat / state

ಗಡಿ ಭಾಗದಿಂದ ಜಿಲ್ಲೆಗೆ ನೋ ಎಂಟ್ರಿ, ಅನಗತ್ಯ ಓಡಾಟಕ್ಕೂ ಬ್ರೇಕ್: ಚಿಕ್ಕಬಳ್ಳಾಪುರ ಎಸ್​​ಪಿ ಎಚ್ಚರಿಕೆ - ಎಸ್​ಪಿ ಮಿಥುನ್ ಕುಮಾರ್ ರೌಂಡ್ಸ್

ಜಿಲ್ಲಾದ್ಯಂತ ಪ್ರಮುಖ ಸ್ಥಳಗಳಲ್ಲಿ 27 ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಹದ್ದಿನ ಕಣ್ಣನ್ನು ಇಟ್ಟಿದ್ದಾರೆ. ಇನ್ನೂ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ 6 ಪ್ರತ್ಯೇಕ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಿದ್ದು, ಆಂಧ್ರ, ಕರ್ನಾಟಕ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ತೆರೆದು ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಕೊಟ್ಟಿದ್ದಾರೆ.

chikkaballapur-sp-warning-for-louckdoen-issue
ಚಿಕ್ಕಬಳ್ಳಾಪುರ ಎಸ್​​ಪಿ ಎಚ್ಚರಿಕೆ

By

Published : May 20, 2021, 5:52 PM IST

ಗೌರಿಬಿದನೂರು: ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿನಿಂದ 4 ದಿನಗಳ ಕಾಲ ಲಾಕ್​ಡೌನ್ ಜಾರಿಗೊಳಿಸಿದ್ದು, ಜಿಲ್ಲಾದ್ಯಂತ ಎಸ್​ಪಿ ಮಿಥುನ್ ಕುಮಾರ್ ರೌಂಡ್ಸ್ ಮಾಡಿ ಅನವಶ್ಯಕವಾಗಿ ಓಡಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರ ಎಸ್​​ಪಿ ಎಚ್ಚರಿಕೆ

ಓದಿ: ತರೀಕೆರೆಯಲ್ಲಿ ಅನಗತ್ಯವಾಗಿ ಓಡಾಡುವ ಜನರಿಗೆ 'ಮುಕ್ತಿವಾಹನ' ಹತ್ತಿಸಿ ಶಿಕ್ಷೆ

ಬಂದ್ ಸಂದರ್ಭದಲ್ಲಿ ಅನಗತ್ಯವಾಗಿ ಜನರ ಓಡಾಟ ತಡೆಯಲು ಪೊಲೀಸರು ಮಾಸ್ಟರ್ ಪ್ಲಾನ್ ಹಾಕಿದ್ದು, ಜಿಲ್ಲಾದ್ಯಂತ ಪ್ರಮುಖ ಸ್ಥಳಗಳಲ್ಲಿ 27 ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಹದ್ದಿನ ಕಣ್ಣಿಟ್ಟಿದ್ದಾರೆ. ಇನ್ನೂ ಜಿಲ್ಲೆಯ ಪ್ರತಿ ತಾಲೂಕಿನಲ್ಲೂ 6 ಪ್ರತ್ಯೇಕ ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಿದ್ದು, ಆಂದ್ರ, ಕರ್ನಾಟಕ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ತೆರೆದು ಅನಾವಶ್ಯಕ ಓಡಾಟಕ್ಕೆ ಬ್ರೇಕ್ ಕೊಟ್ಟಿದ್ದಾರೆ.

ಇನ್ನೂ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಸೂಕ್ತ ಕಾರಣವಿಲ್ಲದೆ ಓಡಾಟ ನಡೆಸುವಂತಿಲ್ಲ. ಅತಂಹವರ ವಿರುದ್ದ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಇನ್ನೂ ಜಿಲ್ಲಾದ್ಯಂತ ವಾಹನ ಸಂಚಾರ, ಜನಸಂಚಾರ ವಿಲ್ಲದೆ ಸ್ತಬ್ಧವಾಗಿದ್ದು, ಮೊದಲನೇ ದಿನ ಲಾಕ್​ಡೌನ್ ಯಶಸ್ವಿಯಾದಂತಾಗಿದ್ದು, ಕೊರೊನಾ ಸೋಂಕು ಹರಡದಂತೆ ಬ್ರೇಕ್ ಕೊಟ್ಟಂತಾಗಿದೆ.

ABOUT THE AUTHOR

...view details