ಕರ್ನಾಟಕ

karnataka

ETV Bharat / state

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.90 ಲಕ್ಷ ರೂ. ವಶಕ್ಕೆ ಪಡೆದ ಚಿಕ್ಕಬಳ್ಳಾಪುರ ಪೊಲೀಸರು - 4.90 ಲಕ್ಷ ರೂ. ವಶ

ನೀತಿ ಸಂಹಿತೆ ಜಾರಿ ನಡುವೆಯೂ ದಾಖಲೆಯಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4.90 ಲಕ್ಷ ರೂ. ಹಣವನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರದ ಹೊಸಹುಡ್ಯ ಸಮೀಪದ ಚೆಕ್ ​ಪೋಸ್ಟ್​ನಲ್ಲಿ ಕಾರು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶ

By

Published : Sep 25, 2019, 1:59 AM IST

ಚಿಕ್ಕಬಳ್ಳಾಪುರ:ದಾಖಲೆ ಇಲ್ಲದೆ ಸಾಗಿಸುತ್ತಿದ್ದ 4.90 ಲಕ್ಷ ರೂ. ಹಣವನ್ನು ಚಿಕ್ಕಬಳ್ಳಾಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ನಡುವೆ ಮಹಾರಾಷ್ಟ್ರ ಮೂಲದ ರಫೀಕ್ ಸಾಬೂದ್ದೀನ್ ಸೈಯದ್ ಎಂಬಾತನ ಕಾರಿನಲ್ಲಿ ದಾಖಲೆಯಿಲ್ಲದೆ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ತಾಲೂಕಿನ ಹೊಸಹುಡ್ಯ ಚೆಕ್ ​ಪೋಸ್ಟ್​ನಲ್ಲಿ ಪೊಲೀಸರು ಹಣ ವಶಕ್ಕೆ ಪಡೆದಿದ್ದಾರೆ.

ಚಿಂತಾಮಣಿಯಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಹೋಗುತ್ತಿದ್ದಾಗ ಚಿಕ್ಕಬಳ್ಳಾಪುರದ ಹೊಸಹುಡ್ಯ ಸಮೀಪದ ಚೆಕ್​ ಪೋಸ್ಟ್​ನಲ್ಲಿ ಕಾರು ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ABOUT THE AUTHOR

...view details