ಕರ್ನಾಟಕ

karnataka

By

Published : Oct 11, 2019, 9:02 PM IST

Updated : Oct 11, 2019, 11:12 PM IST

ETV Bharat / state

ಯಲಹಂಕ ಶಾಸಕ, ಸಿಎಂ ಸಹಿ ನಕಲು ಆರೋಪ: ಪೊಲೀಸರಿಗೆ ದೂರು

ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್‌ ಹಾಗೂ ಸಿಎಂ ಸಹಿ ನಕಲು ಮಾಡಿರುವ ಆರೋಪ ಕೇಳಿ ಬಂದಿದೆ. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಅವರನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡುವಂತೆ ಸಹಿ ಹಾಕಿರುವ ಪತ್ರಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಯಲಹಂಕ ಶಾಸಕ

ಚಿಕ್ಕಬಳ್ಳಾಪುರ:ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಶಾಸಕರ ಸಹಿಯನ್ನು ನಕಲಿ ಮಾಡಿ ಮುಖ್ಯಮಂತ್ರಿಗಳಿಂದ ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡಿಸಿಕೊಂಡ ಪತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಾಂತ್ ಅವರನ್ನು ಬೇರೊಂದು ಸ್ಥಳಕ್ಕೆ ವರ್ಗಾವಣೆ ಮಾಡುವಂತೆ, ಯಲಹಂಕ ಶಾಸಕರ ಹಾಗೂ ಸಿಎಂ ಸಹಿ ಹಾಕಿರುವ ಬಗ್ಗೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ನಕಲು ಸಹಿ ಪತ್ರ

No-CMRK 379: 2019 ಇದೇ ತಿಂಗಳ 18:9 ರ ನನ್ನ ಲೆಟರ್‌ಹೆಡ್ ಪರಿಶೀಲಿಸಿದಾಗ ಶಿಫಾರಸು ಮಾಡಿದ ಪತ್ರದಲ್ಲಿ ಇರುವ ಸಹಿ ನನ್ನದಾಗಿಲ್ಲ. ಈ ಪತ್ರವನ್ನು ಮುಖ್ಯಮಂತ್ರಿಗಳಿಗೆ ನೀಡಿರುವುದು ಅಪರಾಧವಾಗಿದೆ. ಪತ್ರದಲ್ಲಿ ಮುಖ್ಯಮಂತ್ರಿಗಳ‌ ಸಹಿಯೂ ನಕಲಾಗಿರುವುದಾಗಿ ತಿಳಿದು ಬರುತ್ತಿದೆ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

Last Updated : Oct 11, 2019, 11:12 PM IST

ABOUT THE AUTHOR

...view details