ಚಿಕ್ಕಬಳ್ಳಾಪುರ: 2020ರ ಆಗಸ್ಟ್ 5 ಇಡೀ ವಿಶ್ವವೇ ಭಾರತವನ್ನ ತಿರುಗಿ ನೋಡಿದ ದಿನವೆಂದರೆ ತಪ್ಪಾಗಲಾರದು. ಎಷ್ಟೋ ವರ್ಷಗಳ ಹಿಂದೂಗಳ ಕನಸು ನನಸಾದ ದಿನವಿದು. ಅಂದು ಪ್ರತಿ ಹಳ್ಳಿ ಹಳ್ಳಿಯಲ್ಲೂ ಸಂಭ್ರಮಾಚರಣೆ ಇತ್ತು.
ಇನ್ನು ದೇಶದ ಪ್ರಧಾನಿ ಮೋದಿ ಸಹಾ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಿದ್ದು, ಪೂಜೆಯ ನಂತರ ಭಕ್ತರಿಗೆ ಕೊಡುವ ಲಡ್ಡು ತಯಾರಿಕೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ವ್ಯಕ್ತಿ ಭಾಗಿಯಾಗಿದ್ದರು. ಇದು ಜಿಲ್ಲೆಯ ಜನರ ಹರ್ಷಕ್ಕೆ ಕಾರಣವಾಗಿದೆ.
ಆಯೋಧ್ಯೆ ಲಡ್ಡು ತಯಾರಿಕೆಯಲ್ಲಿ ಭಾಗಿಯಾಗಿದ್ದರು ಚಿಕ್ಕಬಳ್ಳಾಪುರ ನಿವಾಸಿ ಹೌದು ನಗರದ ಮೇಸ್ತ್ರಿ ರಾಮಚಂದ್ರಪ್ಪ ಹಾಗೂ ರಾಮಾಂಜನಮ್ಮ ದಂಪತಿ ಮೂರನೇ ಪುತ್ರ ಶೇಷಾದ್ರಿ ಇರಗಂಪಲ್ಲಿಯಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ನಗರದ ಡಿಲಿಜಿಯನ್ಸ್ ಶಾಲೆಯಲ್ಲಿ ಫ್ರೌಢ ಶಿಕ್ಷಣ ಪಡೆದುಕೊಂಡು ತಿರುಮಲ ತಿರುಪತಿಯಲ್ಲಿ ಲಡ್ಡು ತಯಾರಿಕೆಯ ಕೆಲಸಕ್ಕೆ ಸೇರಿದ್ದರು. ಇದೇ ವೇಳೆ, ಐಎಎಸ್ ಪದವಿಗೆ ರಾಜೀನಾಮೆ ನೀಡಿ ಧಾರ್ಮಿಕ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡಿದ್ದ ಕಿಶೋರ್ ಕುನಾಲ್ ಪಾಟ್ನಾದ ಹನುಮಾನ್ ದೇವಸ್ಥಾನದ ಟ್ರಸ್ಟಿಯಾಗಿದ್ದರು. ನಂತರ 2006 ರಲ್ಲಿ ತಿರುಮಲಗೆ ಭೇಟಿ ನೀಡಿದ ವೇಳೆ ಅಲ್ಲಿನ ಅನ್ನದಾಸೋಹ ಹಾಗೂ ಲಡ್ಡು ತಯಾರಿಕ ಘಟಕಗಳನ್ನ ವೀಕ್ಷಿಸಿದ್ದರು. ಈ ವೇಳೆ ಜಿಲ್ಲೆಯ ಶೇಷಾದ್ರಿ ಅವರ ಕಾರ್ಯವೈಖರಿ ಗಮನಿಸಿ ಟಿಟಿಡಿ ಆಡಳಿತ ಮಂಡಳಿಗೆ ಪಾಟ್ನಾದ ದೇವಸ್ಥಾನಕ್ಕೆ ಕಳುಹಿಸಲು ಮನವಿ ಮಾಡಿಕೊಂಡಿದ್ದರು.
ಅಯೋಧ್ಯಾ ಲಡ್ಡು ತಯಾರಿಕೆಯಲ್ಲಿ ಭಾಗಿಯಾಗಿದ್ದರು ಚಿಕ್ಕಬಳ್ಳಾಪುರ ನಿವಾಸಿ ಇನ್ನೂ ಅದರಂತೆ ಶೇಷಾದ್ರಿ ಪಾಟ್ನಾದ ಹನುಮಾನ್ ದೇವಸ್ಥಾನದಲ್ಲಿ ಲಡ್ಡು ಹಾಗೂ ಅನ್ನದಾಸೋಹ ಕಾರ್ಯ ಕೈಂಕರ್ಯಗಳನ್ನು ನಡೆಸಿ ನಂತರ ವ್ಯವಸ್ಥಾಪಕರಾಗಿ ಕಾರ್ಯನಿರ್ವನಿಹಿಸುತ್ತಿದ್ದಾರೆ. ಇನ್ನು ಇದೇ ವೇಳೆ, ಅಯೋಧ್ಯೆಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಲಡ್ಡು ತಯಾರಿಸಿ ವಿತರಿಸಲು ನಿವೃತ್ತ ಐಎಎಸ್ ಅಧಿಕಾರಿ ಕಿಶೋರ್ ಕುನಾಲ್‌ಗೆ ವಹಿಸಲಾಗಿತ್ತು. ನಂತರ ಈ ಜವಾಬ್ದಾರಿಯನ್ನು ಜಿಲ್ಲೆಯ ಶೇಷಾದ್ರಿಗೆ ಒಪ್ಪಿಸಿದ್ದರು. ಲಡ್ಡು ತಯಾರಿಸಿ ಹಂಚುವಲ್ಲಿ ಯಶಸ್ವಿಯಾಗಿದ್ದು, ಇತ್ತ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಒಟ್ಟಾರೆ ಭವ್ಯ ರಾಮಮಂದಿರ ನಿರ್ಮಾಣದ ಕಾರ್ಯದಲ್ಲಿ ಕನ್ನಡಿಗರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಕ್ತಿಯ ಭಾಗಿಯಾಗಿರುವುದು ಕರ್ನಾಟಕ ರಾಜ್ಯದ ಜನತೆಗೆ ಸಂತಸ ತಂದಂತಾಗಿದೆ.