ಚಿಕ್ಕಬಳ್ಳಾಪುರ: 2ನೇ ಹಂತದ ಗ್ರಾಪಂ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಆರ್.ಲತಾ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
2ನೇ ಹಂತದ ಗ್ರಾಪಂ ಚುನಾವಣೆ: ಮತಗಟ್ಟೆಗಳಿಗೆ ಚಿಕ್ಕಬಳ್ಳಾಪುರ ಡಿಸಿ ಭೇಟಿ - DC Visit to polling booths
ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 23, ಗೌರಿಬಿದನೂರು ತಾಲೂಕಿನ 37 ಮತ್ತು ಗುಡಿಬಂಡೆ ತಾಲೂಕಿನ 8 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 68 ಗ್ರಾಮ ಪಂಚಾಯಿತಿಗಳಿಗೆ ನಾಳೆ ಮತದಾನ ನಡೆಯಲಿದೆ.
![2ನೇ ಹಂತದ ಗ್ರಾಪಂ ಚುನಾವಣೆ: ಮತಗಟ್ಟೆಗಳಿಗೆ ಚಿಕ್ಕಬಳ್ಳಾಪುರ ಡಿಸಿ ಭೇಟಿ Chikkaballapur DC Visit to polling booths](https://etvbharatimages.akamaized.net/etvbharat/prod-images/768-512-10017578-thumbnail-3x2-net.jpg)
2ನೇ ಹಂತದ ಗ್ರಾ.ಪಂ ಚುನಾವಣೆ: ಮತಗಟ್ಟೆಗಳಿಗೆ ಚಿಕ್ಕಬಳ್ಳಾಪುರ ಡಿಸಿ ಭೇಟಿ
2ನೇ ಹಂತದ ಗ್ರಾಪಂ ಚುನಾವಣೆ: ಮತಗಟ್ಟೆಗಳಿಗೆ ಚಿಕ್ಕಬಳ್ಳಾಪುರ ಡಿಸಿ ಭೇಟಿ
2ನೇ ಹಂತದ ಚುನಾವಣೆಯಲ್ಲಿ 1095 ಸ್ಥಾನಗಳ ಪೈಕಿ 2974 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 68 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದೆ. ಈಗಾಗಲೇ 53 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 23, ಗೌರಿಬಿದನೂರು ತಾಲೂಕಿನ 37 ಮತ್ತು ಗುಡಿಬಂಡೆ ತಾಲೂಕಿನ 8 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 68 ಗ್ರಾಮ ಪಂಚಾಯಿತಿಗಳಿಗೆ ನಾಳೆ ಮತದಾನ ನಡೆಯಲಿದೆ.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಬಳಿಯಿಂದ ಸಾರಿಗೆ ಬಸ್ಗಳಲ್ಲಿ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು. ಮತದಾನ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.