ಕರ್ನಾಟಕ

karnataka

ETV Bharat / state

ತಾನೇ ಮದ್ಯ ಕಳ್ಳತನ ಮಾಡಿ, ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕ - bar was stolen by owner

ಲಾಕ್​​ಡೌನ್ ವೇಳೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಆಗುತ್ತಿರುವುದನ್ನು ನೋಡಿದ ಬಾರ್ ಮಾಲೀಕ, ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ತನ್ನ ಬಾರ್​ನ ಹಿಂಭಾಗದ ಗೋಡೆ ಕೊರೆದು ಬಳಿಕ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸಿದ್ದಾನೆ. ಪ್ರಕರಣದ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ
ಆರೋಪಿ

By

Published : May 4, 2020, 10:00 PM IST

ಚಿಕ್ಕಬಳ್ಳಾಪುರ:ಕಳೆದ ಏಪ್ರಿಲ್​​ 30ರಂದು ನಡೆದ ಗೋಲ್ಡನ್​​ ಬಾರ್​ ಆ್ಯಂಡ್​​ ರೆಸ್ಟೋರೆಂಟ್​​ನ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು, ಬಾರ್​​ ಮಾಲೀಕ ಹಾಗೂ ನಗರಸಭೆ ಸದಸ್ಯ ಕೆ.ಆರ್​. ದೀಪಕ್​ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ

ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿರುವ ಗೋಲ್ಡನ್ ಬಾರ್ ಆ್ಯಂಡ್ ರೆಸ್ಟೋರೆಂಟ್​​ನಲ್ಲಿ ಏಪ್ರಿಲ್ 30ರಂದು ಕಳ್ಳತನ ನಡೆದಿತ್ತು. ಕಳ್ಳತನದ ದೂರು ದಾಖಲಿಸಿಕೊಂಡ ನಂದಿ ಗಿರಿಧಾಮ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ. ಬಾರ್ ಮಾಲೀಕ ಹಾಗೂ 14 ವಾರ್ಡ್​ನ ನಗರಸಭೆಯ ಸದಸ್ಯ ಕೆ. ಆರ್. ದೀಪಕ್ ಸೇರಿದಂತೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ

ಬಾರ್ ಕಳ್ಳತನ ಬಗ್ಗೆ ತನಿಖೆ ಮಾಲೀಕ ದೀಪಕ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಆರೋಪಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಲಾಕ್​​ಡೌನ್ ವೇಳೆ ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಆಗುತ್ತಿರುವುದನ್ನು ನೋಡಿದ ಬಾರ್ ಮಾಲೀಕ, ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ತನ್ನ ಬಾರ್​ನ ಹಿಂಭಾಗದ ಗೋಡೆ ಕೊರೆದು ಬಳಿಕ ಸಿಸಿಟಿವಿ ಕ್ಯಾಮೆರಾಗಳನ್ನು ನಾಶಪಡಿಸಿದ್ದಾನೆ.

ಆರೋಪಿ

ಸುಮಾರು 1 ಲಕ್ಷ ರೂ. ಮೌಲ್ಯದ ಮದ್ಯ ಹೊರಸಾಗಿಸಿ ಬಳಿಕ ಕಳ್ಳತನದ ಕಥೆ ಸೃಷ್ಟಿಸಿದ್ದಾನೆ. ಬಾರ್​​ ಮಾಲೀಕ ದೀಪಕ್ ಈ ಕೃತ್ಯಕ್ಕೆ ಪಾಲ್ಗೊಂಡಿದ್ದ ನಾಲ್ಕು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ಏಳು ಕ್ರೇಟ್ ಮದ್ಯ, ಒಂದು ಆಟೋ, ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details