ಕರ್ನಾಟಕ

karnataka

ETV Bharat / state

ಗೌರಿಬಿದನೂರು ಬಳಿ ಅಪಘಾತ : ಪತಿ, ಪತ್ನಿ, ಪುತ್ರಿ ಸಾವು - ಚಿಕ್ಕಬಳ್ಳಾಪುರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವು

ಅಪಘಾತದಲ್ಲಿ ಪತಿ, ಪತ್ನಿ ಮತ್ತು ಪುತ್ರಿ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ..

ಗೌರಿಬಿದನೂರು ಬಳಿ ಅಪಘಾತ
ಗೌರಿಬಿದನೂರು ಬಳಿ ಅಪಘಾತ

By

Published : Mar 14, 2022, 12:00 PM IST

Updated : Mar 14, 2022, 12:07 PM IST

ಚಿಕ್ಕಬಳ್ಳಾಪುರ :ಗೌರಿಬಿದನೂರು ತಾಲೂಕಿನ ಹನುಮೇನಹಳ್ಳಿ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಅಲೀಪುರ ಗ್ರಾಮದ ಅನಿತಾ (30), ಆಕೆಯ ಪತಿ ಹರೀಶ್(35) ಹಾಗೂ ಪುತ್ರಿ ತೇಜು (6) ಎಂದು ಗುರುತಿಸಲಾಗಿದೆ.

ಅನಿತಾ, ತೇಜು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹರೀಶ್ ಮೃತಪಟ್ಟಿದ್ದಾನೆ. ಮೃತ ದಂಪತಿಯ ಮಗ ಜಾನು(6) ಮತ್ತು ಹರೀಶನ ಸಹೋದರ ರಮೇಶ್(25) ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.

ತಾಲೂಕಿನ ಅಲೀಪುರದ ಹರೀಶ್, ಆತನ ಹೆಂಡತಿ ಅನಿತಾ ಹಾಗೂ ಸಹೋದರ ರಮೇಶ ಬೆಳಗ್ಗೆ ಹತ್ತು ಗಂಟೆಗೆ ತೊಂಡೇಭಾವಿಯ ಚರ್ಚ್‌​ಗೆ ಬಂದು ಪ್ರಾರ್ಥನೆ ಮಾಡಿ ನಂತರ ತನ್ನ ಸಹೋದರಿಯ ಮನೆಗೆ ಹೋಗಿ ಅಲ್ಲಿಂದ ತಮ್ಮ ಊರಿಗೆ ಟಿವಿಎಸ್​ ದ್ವಿಚಕ್ರ ವಾಹನದಲ್ಲಿ ವಾಪಸ್ಸಾಗುತ್ತಿದ್ದಾಗ ಎದುರಿನಿಂದ ಬಂದ್ ಖಾಸಗಿ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಇನ್ನೂ ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸ್​ಐ ಹರೀಶ್ ಭೇಟಿ ನೀಡಿ, ಬಸ್ ಚಾಲಕನನ್ನು ವಶಪಡಿಸಿಕೊಂಡು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

(ಇದನ್ನೂ ಓದಿ: ಟ್ರಕ್ ​- ಟ್ರ್ಯಾಕ್ಟರ್​ ಮಧ್ಯೆ ಭೀಕರ ಅಪಘಾತ: ವಿಠ್ಠಲನ ಪಾದ ಸೇರಿದ 4 ಭಕ್ತರು, 40ಕ್ಕೂ ಹೆಚ್ಚು ಜನರಿಗೆ ಗಾಯ!)

Last Updated : Mar 14, 2022, 12:07 PM IST

ABOUT THE AUTHOR

...view details