ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಪ್ರಕರಣ: ಗುಡಿಬಂಡೆ ಸಿಪಿಐ, ಎಸ್​​ಐ ಅಮಾನತು - ಜಿಲೆಟಿನ್ ಸ್ಪೋಟ ಸಂಭವಿಸಿದ ಹಿರೇನಾಗವಲ್ಲಿ

ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್​​​ಪೆಕ್ಟರ್ ಮಂಜುನಾಥ್, ಸಬ್ ​​​ಇನ್ಸ್​ಪೆಕ್ಟರ್​​ ಗೋಪಲ ರೆಡ್ಡಿ ಅವರನ್ನು ಅಮಾನತು ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

chikballapura-jiletin-blast-case-two-officers-suspend
ಗುಡಿಬಂಡೆ ಸಿಪಿಐ, ಎಸ್​​ಐ ಸಸ್ಪೆಂಡ್

By

Published : Feb 24, 2021, 3:12 PM IST

Updated : Feb 24, 2021, 5:35 PM IST

ಚಿಕ್ಕಬಳ್ಳಾಪುರ:ತಾಲೂಕಿನ ಹಿರೇನಾಗವಲ್ಲಿ ಬಳಿ ಫೆ. 22ರಂದು ರಾತ್ರಿ ಜಿಲೆಟಿನ್ ಸ್ಫೋಟಗೊಂಡು 5 ಜನ ದುರ್ಮರಣ ಹೊಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

ಪೊಲೀಸ್​ ಅಧಿಕಾರಿಗಳ ಅಮಾನತು

ಓದಿ: ಕದ್ದ ಮಾಲನ್ನು ಮಾರುತ್ತಿದ್ದ ವೇಳೆ ಸಿಕ್ಕಿಬಿದ್ದ ಕುಖ್ಯಾತ ಮನೆಗಳ್ಳರು!

ಗುಡಿಬಂಡೆ ಪೊಲೀಸ್ ಠಾಣೆಯ ಇನ್ಸ್​​​ಪೆಕ್ಟರ್ ಮಂಜುನಾಥ್, ಸಬ್ ​​​ಇನ್ಸ್​ಪೆಕ್ಟರ್​​ ಗೋಪಲ ರೆಡ್ಡಿ ಅವರನ್ನು ಅಮಾನತು ಮಾಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಫೆ. 7ರಂದು ಕ್ರಷರ್ ಹಾಗೂ ಕ್ವಾರಿ ಮಾಲೀಕರ ವಿರುದ್ಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಕರ್ತವ್ಯ ಲೋಪವಾಗಿರುವ ಹಿನ್ನೆಲೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಜಿಲೆಟಿನ್ ಸ್ಫೋಟ ಸಂಭವಿಸಿದ ಹಿರೇನಾಗವಲ್ಲಿ ಪ್ರದೇಶ ಚಿಕ್ಕಬಳ್ಳಾಪುರ ತಾಲೂಕಿಗೆ ಸೇರಿದ್ದರೂ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.

Last Updated : Feb 24, 2021, 5:35 PM IST

ABOUT THE AUTHOR

...view details