ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಡಿಸಿಯಿಂದ ಪೋಲಿನಾಯ್ಕನಪಲ್ಲಿಯಲ್ಲಿ ಗ್ರಾಮ ವಾಸ್ತವ್ಯ - ಬಾಗೇಪಲ್ಲಿ ತಹಶಿಲ್ದಾರ್ ಡಿ. ಎ.ದಿವಾಕರ್

ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಪೋಲಿನಾಯ್ಕನಪಲ್ಲಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಉಪನಿರ್ದೇಶಕರು, ಬಾಗೇಪಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯುಕ್ತ ಸಭೆ ನಡೆಸಲಿದ್ದಾರೆ.

Dc
Dc

By

Published : Apr 10, 2021, 5:19 PM IST

ಬಾಗೇಪಲ್ಲಿ: 17/04/2021 ಶನಿವಾರ ರಾಜ್ಯ ಸರ್ಕಾರದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬಾಗೇಪಲ್ಲಿ ತಾಲೂಕಿನ ಮಿಟ್ಟೇಮರಿ ಹೋಬಳಿ ಪೋಲಿನಾಯ್ಕನಪಲ್ಲಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶನಿವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಪೋಲಿನಾಯ್ಕನಪಲ್ಲಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳು, ಉಪನಿರ್ದೇಶಕರು, ಬಾಗೇಪಲ್ಲಿ ತಹಶೀಲ್ದಾರ್ ಡಿ.ಎ.ದಿವಾಕರ್ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಪ್ರಯುಕ್ತ ಸಭೆ ನಡೆಸಲಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಭೂ ಮಾಪನ ಇಲಾಖೆ, ಆಹಾರ ಇಲಾಖೆ, ಕೃಷಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಹಿಂದುಳಿದ ಅಲ್ಪಸಂಖ್ಯಾತ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಪಹಣಿ ಲೋಪದೋಷಗಳ ತಿದ್ದುಪಡಿ, ಪೌತಿಖಾತೆ, ಸರ್ಕಾರದ ಯೋಜನೆಗಳಾದ ವ್ಯದ್ಧಾಪ್ಯ ವೇತನ, ರಾಷ್ಟ್ರೀಯ ಕುಟುಂಬ ನೆರವು ಯೋಜನೆ, ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸುವುದು. ಗ್ರಾಮಗಳಿಗೆ ಸ್ಮಶಾನ, ಆಶ್ರಯ ಯೋಜನೆಯಲ್ಲಿ ಜಮೀನು ಕಾಯ್ದಿರಿಸುವುದು ಬಗ್ಗೆ, ಆದಾರ್ ಕಾರ್ಡ್‌ನ ಅನುಕೂಲತೆ ಹಾಗೂ ಮತದಾರರ ಪಟ್ಟಿ ಪರಿಸ್ಕರಣೆ ಮತ್ತು ಬೆಳೆ ಪರಿಹಾರ. ಸಕಾಲ ಯೋಜನೆಯಡಿಯಲ್ಲಿ ಓದಗಿಸಲಾಗುವ ಸೌಲಭಗಳು, ದರಕಾಸ್ತು, ಪೋಡಿ ಮುಕ್ತ ಗ್ರಾಮ, ಮಂಜೂರಾದ ಜಮೀನುಗಳ ದುರಸ್ತಿ, ಪಡಿತರ ಚೀಟಿ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಲಿಖಿತ ರೂಪದಲ್ಲಿ ಆರ್ಜಿಯನ್ನು ಸಲ್ಲಿಸಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ.

ಬಾಗೇಪಲ್ಲಿ ತಾಲೂಕು ತಹಶೀಲ್ದಾರ್ ಡಿ.ಎ.ದಿವಾಕರ್ ಮಾಧ್ಯಮಗಳ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

...view details