ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ: ನಡುರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ.. ಗ್ರಾಮಸ್ಥರಲ್ಲಿ ಆತಂಕ - ಚಿಕ್ಕಬಳ್ಳಾಪುರ ಚಿರತೆ ಸುದ್ದಿ

ಚಿಕ್ಕಬಳ್ಳಾಪುರದ ಕರಿಯಪ್ಪನಹಳ್ಳಿ-ತಲಕಾಯಲಬೆಟ್ಟ ಗ್ರಾಮದ ಬೈರೇಶ್ವರ ಗುಡಿಯ ಸಮೀಪ ಚಿರತೆ ಮತ್ತು ಅದರ ಮರಿಗಳು ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

Cheetah found
ಚಿರತೆ ಪ್ರತ್ಯಕ್ಷ

By

Published : Mar 9, 2021, 12:23 PM IST

ಚಿಕ್ಕಬಳ್ಳಾಪುರ:ನಡುರಸ್ತೆಯಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿರುವ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕರಿಯಪ್ಪನಹಳ್ಳಿ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಕರಿಯಪ್ಪನಹಳ್ಳಿ-ತಲಕಾಯಲಬೆಟ್ಟ ಗ್ರಾಮದ ಬೈರೇಶ್ವರ ಗುಡಿಯ ಸಮೀಪ ಚಿರತೆ ಮತ್ತು ಅದರ ಮರಿಗಳು ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ.

ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟದಲ್ಲಿ ಈ ಹಿಂದೆ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರು ಆತಂಕಗೊಂಡಿದ್ದರು. ಇದೀಗ ಗ್ರಾಮಸ್ಥರು ವಾಹನದಲ್ಲಿ ಹೋಗುವ ವೇಳೆ ಚಿರತೆ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಮತ್ತು ಅದರ ಮರಿಗಳನ್ನು ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಚಿರತೆ ಈ ಹಿಂದೆ ಕರಿಯಪ್ಪನಹಳ್ಳಿ ಸುತ್ತಮುತ್ತಲು ಕುರಿ-ಮೇಕೆ ಮರಿಗಳ ಮೇಲೆ ದಾಳಿ ಮಾಡಿ ತಿಂದುಹಾಕಿದೆ. ಮುಂದಿನ ದಿನಗಳಲ್ಲಿ ಜನರಿಗೆ ತೊಂದರೆ ಆಗುವ ಭೀತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕೆಂದು ಗ್ರಾಮಸ್ಥರು ಕೋರಿದ್ದಾರೆ.

ABOUT THE AUTHOR

...view details