ಕರ್ನಾಟಕ

karnataka

ETV Bharat / state

ಚಾಬ್ರಾಸ್ ಅಸೋಸಿಯೇಟ್ಸ್ ಟೋಲ್ ನೌಕರರ ವಜಾ ಖಂಡಿಸಿ ಪ್ರತಿಭಟನೆ

ಕೈಬಿಟ್ಟಿರುವ ನಾಲ್ವರ ನೌಕರರಾದ ಗಿರೀಶ್ .ಕೆ.ಎನ್., ಕೊಂಡಂವಾರಿಪಲ್ಲಿ ವೆಂಕಟೇಶ್ ಹೊಸಹುಡ್ಯ, ಆರ್.ವೆಂಕಟರೆಡ್ಡಿ ಯಲ್ಲಂಪಲ್ಲಿ, ಸುರೇಶ್ ಆದಿಗಾನಹಳ್ಳಿ ಈ ನಾಲ್ವರ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಇದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಮಾಡುತ್ತವೆ ಎಂದು ಎಚ್ಚರಿಸಿದ್ದಾರೆ.

chabras-associates-protests
ಟೋಲ್ ನೌಕರರ ವಜಾ ಖಂಡಿಸಿ ಪ್ರತಿಭಟನೆ

By

Published : Mar 19, 2021, 10:44 PM IST

ಬಾಗೇಪಲ್ಲಿ: ಪಟ್ಟಣದ ಹೊರವಲಯದ ಟೋಲ್​​ಗೇಟ್ ಚಾಬ್ರಾಸ್ ಅಸೋಸಿಯೇಟ್ಸ್ ಬಾಗೇಪಲ್ಲಿ ಟೋಲ್ ಪ್ಲಜಾ ಆಡಳಿತ ಮಂಡಳಿ ಕೆಲಸ ಮಾಡುತ್ತಿದ್ದ ನೌಕರನನ್ನು ಕಾನೂನು ಬಾಹಿರವಾಗಿ ಕೆಲಸದಿಂದ ವಜಾ ಮಾಡಿರುವ ಕ್ರಮವನ್ನು ಖಂಡಿಸಿ ಬಾಗೇಪಲ್ಲಿ ಸಿಐಟಿಯು ಹಾಗೂ ಕರವೇ ಶಿವರಾಮೇಗೌಡ ಬಣ ಪ್ರತಿಭಟನೆ ನಡೆಸಿದರು.

ಟೋಲ್ ನೌಕರರ ವಜಾ ಖಂಡಿಸಿ ಪ್ರತಿಭಟನೆ

ಇದನ್ನೂ ಓದಿ: ಮಹಾದಾಯಿ ವಿವಾದ: ಬಿಗಿ ಬಂದೋಬಸ್ತ್​ ಮಧ್ಯೆ ಜಂಟಿ ಪರಿಶೀಲನೆ, ಮಾಧ್ಯಮಗಳಿಗೆ ನಿರ್ಬಂಧ

ಸಿಐಟಿಯು ಮುಖಂಡ ಆಂಜನೇಯ ರೆಡ್ಡಿ ಮಾತನಾಡಿ, ಟೋಲ್​​ಗೇಟ್ ನೌಕರರ ಹಿತ ಕಾಯದೆ ನೌಕರರ ಉದ್ಯೋಗ ಭದ್ರತೆ ನೀಡದೇ ಹಾಗೂ ಕಿರುಕುಳ ಒಡ್ಡಿರುವ ಆಡಳಿತ ಮಂಡಳಿಯ ವರ್ತನೆ ಅಮಾನವೀಯವಾದುದು. ನೌಕರ ವಿರೋಧಿ ಧೋರಣೆ ಅನುಸರಿಸಲಾಗಿದೆ. ಕೈಬಿಟ್ಟಿರುವ ನಾಲ್ವರ ನೌಕರರಾದ ಗಿರೀಶ್ .ಕೆ.ಎನ್., ಕೊಂಡಂವಾರಿಪಲ್ಲಿ ವೆಂಕಟೇಶ್ ಹೊಸಹುಡ್ಯ, ಆರ್.ವೆಂಕಟರೆಡ್ಡಿ ಯಲ್ಲಂಪಲ್ಲಿ, ಸುರೇಶ್ ಆದಿಗಾನಹಳ್ಳಿ ಈ ನಾಲ್ವರ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ ಇದ್ದರೆ ಅನಿರ್ದಿಷ್ಟ ಮುಷ್ಕರ ಮಾಡುತ್ತವೆ ಎಂದು ಹೇಳಿದರು.

ಈ ಆಡಳಿತ ಮಂಡಳಿ ನೌಕರರಿಗೆ ಕೆಲಸದ ವೇಳೆ ಕಿರುಕುಳ ಕೊಡುತ್ತಿದ್ದು, ಈ ಹಿಂದೆ ಟೋಲ್​ಗೇಟ್ ನೌಕರರಾದ ರಮಣ ಸಂತೋಷ ಸ್ವಯಂಕೃತವಾಗಿ ರಾಜೀನಾಮೆ ನೀಡಿದ್ದಾರೆ. ಅದ್ದರಿಂದ ಎಲ್ಲಾ ನೌಕರರನ್ನು ಮತ್ತೆ ಕೆಲಸಕ್ಕೆ ನೇಮಿಸಲು ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಕರವೇ ಶಿವರಾಮೇಗೌಡ ಬಣ ಬಾಗೇಪಲ್ಲಿ ತಾಲ್ಲೂಕು ಘಟಕ ಅದ್ಯಕ್ಷ ಶಂಕರ್ ಎಲ್.ಎನ್, ಜಿಲ್ಲಾ ಸಂಚಾಲಕ ತಿಪ್ಪಣ್ಣ ತಾಲ್ಲೂಕು ಸಂಚಾಲಕ ಸತೀಶ್. ಮುಂತಾದವರು ಪ್ರಮುಖರು ಪಾಲ್ಗೊಂಡಿದ್ದರು.

ABOUT THE AUTHOR

...view details