ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಪೋಷಕರು ಅಂಗನವಾಡಿ ಹಾಗೂ ಸರ್ಕಾರಿ ಶಾಲೆಗಳತ್ತ ಅಸಡ್ಡೆಯಿಂದ ನೋಡುತ್ತಿದ್ದಾರೆ. ಬಹಳಷ್ಟು ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಮುಖಮಾಡಿಸಲು ಚಿಕ್ಕಬಳ್ಳಾಪುರ ಜಿಲ್ಲೆಯ ಸಿಇಒ ಫೌಜಿಯಾ ತರನಮ್ ಅವರು ಅಂಗನವಾಡಿ ಕೇಂದ್ರಗಳಿಗೆ ಹೊಸ ಹುರುಪು ನೀಡುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಸೆಳೆಯಲು ಸಿಇo ಹೊಸ ಪ್ಲಾನ್.. ಹೌದು, ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನೆಯಡಿ ಅಂಗನವಾಡಿ ಕಟ್ಟಡಗಳಿಗೆ ಹೊಸ ರೂಪು ರೇಷೆಗಳನ್ನು ನೀಡಿದ್ದು, ಮಕ್ಕಳನ್ನು ಇತ್ತ ಸೆಳೆಯುವ ಪ್ರಯತ್ನ ಇದಾಗಿದೆ. ಬಣ್ಣ ಬಣ್ಣದ ಚಿತ್ರಗಳು, ಕೈತೋಟ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೊರಾಂಗಣ ಕಲಿಕೆ ಹಾಗೂ ಮಕ್ಕಳು ಕಲಿಯಲು ಗೋಡೆಯ ಮೇಲೆ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಪದಗಳು ಬರೆಯಿಸಲಾಗಿದ್ದು, ನೋಡುಗರಿಗೆ ಆಕರ್ಷಕ ಕೇಂದ್ರವಾಗುತ್ತಿದೆ.
ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಸೆಳೆಯಲು ಸಿಇಒನಿಂದ ವಿನೂತನ ಪ್ರಯತ್ನ 8 ಲಕ್ಷ ಮೊತ್ತದಲ್ಲಿ ಅಂಗನವಾಡಿ ಕೊಠಡಿಯನ್ನು ನಿರ್ಮಿಸಲಾಗಿದೆ. ನರೇಗಾ ಯೋಜನೆಯಡಿ 5 ಲಕ್ಷ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಯೋಜನೆಯಡಿ 3 ಲಕ್ಷ ಮೊತ್ತದಲ್ಲಿ ಒಟ್ಟು 120 ಕ್ಕೂ ಅಧಿಕ ಕಟ್ಟಡಗಳನ್ನು ನಿರ್ಮಾಣವಾಗುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಪುಟ್ಟ ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಬೇಕಾದರೆ ಕೊಠಡಿಯ ಒಳಗೆ ಹೋಗಲು ಕನ್ನಡ ಹಾಗೂ ಇಂಗ್ಲಿಷ್ ವರ್ಣ ಮಾಲೆ ಗಮನ ಸೆಳೆಯುತ್ತದೆ. ಅಷ್ಟೇ ಅಲ್ಲ ಸಂಖ್ಯೆಗಳು, ಪ್ರಾಣಿ ಪಕ್ಷಿಗಳ ಹೆಸರು ಹಾಗೂ ಶಿಕ್ಷಕರಿಗೆ ನಮನಗಳನ್ನು ಅರ್ಪಿಸಿ ಮಕ್ಕಳು ಕೊಠಡಿಗೆ ಹೋಗುತ್ತಿರುವ ಪ್ರಾಯೋಗಿಕ ದೃಶ್ಯಗಳು ಮಕ್ಕಳನ್ನು ಮತ್ತಷ್ಟು ಆಕರ್ಷಿಸುವಂತಿವೆ.
ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಸೆಳೆಯಲು ಸಿಇಓನಿಂದ ವಿನೂತನ ಪ್ರಯತ್ನ ಸಾರ್ವಜನಿಕರು ಸರ್ಕಾರಿ ಕೆಲಸಗಳಿಗೆ ಹೋಗುವಂತೆ ಸರ್ಕಾರಿ ಶಾಲೆಗಳಿಗೆ ಬರಬೇಕು ಎಂಬ ಸಿಇಒ ಫೌಜಿಯಾ ತರನಮ್ ಆಕಾಂಕ್ಷೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಈಗಾಗಲೇ ಮಕ್ಕಳಿಗೆ ಪಾಠ ಮಾಡಿ ಹಾಗೂ ನರೇಗಾ ಕಾಮಗಾರಿಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ. ಜಿಲ್ಲೆಯ ಜನತೆಯ ಮನಗೆದ್ದಿರುವ ಸಿಇಒ ಈಗ ಅಂಗನವಾಡಿ ಕೇಂದ್ರಗಳ ಮೇಲಿನ ಕಾಳಜಿಗೆ ರಾಜ್ಯದಲ್ಲಿ ಮಾದರಿ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆ ಪಾತ್ರರಾಗುತ್ತಿದ್ದಾರೆ.