ಚಿಕ್ಕಬಳ್ಳಾಪುರ: ಅನರ್ಹ ಶಾಸಕರ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತಿದ್ದು, ಈ ಮಧ್ಯೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ಮಧ್ಯಂತರ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡುವ ವಿಶ್ವಾಸವಿದೆ: ಡಾ. ಕೆ. ಸುಧಾಕರ್ - ಅನರ್ಹ ಶಾಸಕರ ವಿಚಾರಣೆ
ಮಧ್ಯಂತರ ಚುನಾವಣೆಗೆ ತಡೆಯಾಜ್ಞೆ ಸಿಗುವ ವಿಶ್ವಾಸವಿದೆ. ಹಿಂದಿನ ಸ್ಪೀಕರ್ ನೀಡಿದ ಆದೇಶ ಕಾನೂನು ಬಾಹಿರ, ಸಂವಿಧಾನ ವಿರೋಧಿಯಾಗಿದೆ ಎಂದು ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಕೆ. ಸುಧಾಕರ್ ಹೇಳಿದ್ರು.
![ಮಧ್ಯಂತರ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡುವ ವಿಶ್ವಾಸವಿದೆ: ಡಾ. ಕೆ. ಸುಧಾಕರ್](https://etvbharatimages.akamaized.net/etvbharat/prod-images/768-512-4510292-thumbnail-3x2-ckmbr.jpg)
ಅನರ್ಹ ಶಾಸಕ ಡಾ.ಕೆ.ಸುಧಾಕರ್
ಅನರ್ಹ ಶಾಸಕ ಡಾ.ಕೆ.ಸುಧಾಕರ್
ಕಾನೂನು ಬಾಹಿರ ಹಾಗೂ ಅಸಾಂವಿಧಾನಿಕವಾಗಿರುವ ಹಿಂದಿನ ಸ್ಪೀಕರ್ ನಮ್ಮನ್ನು 'ಅನರ್ಹರು' ಎಂದು ಆದೇಶ ನೀಡಿದ್ದನ್ನು ಪ್ರಶ್ನಿಸಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಕೂಡಲೇ ಅನರ್ಹ ಶಾಸಕರೆಲ್ಲ ಒಟ್ಟು ಸೇರಿ ಚರ್ಚಿಸಲಿದ್ದೇವೆ ಎಂದು ಹೇಳಿದರು.