ಚಿಂತಾಮಣಿ :ನಗರದ ಹೃದಯ ಭಾಗದಲ್ಲಿರುವ ರುಧ್ರಭೂಮಿಯಲ್ಲಿ ಶವಗಳನ್ನು ಸುಡುವುದರಿಂದ ವಾಸನೆ ಹೆಚ್ಚಾಗುತ್ತಿದ್ದು, ಮನೆಯಲ್ಲಿರಲು ಸಾಧ್ಯವಾಗುತ್ತಿಲ್ಲ ಎಂದು ಇಲ್ಲಿನ ಅಶ್ವಿನಿ ಬಡಾವಣೆ ನಿವಾಸಿಗಳು ಸಂಕಟ ತೋಡಿಕೊಂಡಿದ್ದಾರೆ.
ನಗರದ ಕೆಎಸ್ಆರ್ಟಿಸಿ ಡಿಪೋ ಮುಂಭಾಗದಲ್ಲಿರುವ ವಾರ್ಡ್ ನಂಬರ್ 7ರ ಅಶ್ವಿನಿ ಬಡಾವಣೆಯಲ್ಲಿನ ಬ್ರಾಹ್ಮಣ, ವೈಶ್ಯರ ರುದ್ರಭೂಮಿಯಲ್ಲಿ ಸತ್ತವರ ಶವಗಳನ್ನು ಸುಡುತ್ತಿರುವುದರಿಂದ ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದಂತಾಗಿದೆ.
ಕೊರೊನಾ ಮೃತರನ್ನು ಕೂಡ ಇಲ್ಲಿ ಸುಡುತ್ತಿರುವುದರಿಂದ ಸಾಕಷ್ಟು ತೊಂದರೆಗಳು ಅನುಭವಿಸುವಂತಾಗಿದೆ. ನಿತ್ಯ ಶವಸಂಸ್ಕಾರಗಳು ನಡೆಯುವುದರಿಂದ ನಿವಾಸಿಗಳಿಗೆ ಹೊಗೆ ಹಾಗೂ ಕೆಟ್ಟ ವಾಸನೆಯಿಂದ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಶವ ಸುಟ್ಟ ವಾಸನೆಗೆ ಸ್ಥಳೀಯರ ಪರದಾಟ.. ಕಳೆದ 30 ವರ್ಷಗಳಿಂದ ಬ್ರಾಹ್ಮಣ, ವೈಶ್ಯರ ರುದ್ರಭೂಮಿಯಲ್ಲಿ ಶವಸಂಸ್ಕಾರ ಮಾಡಲಾಗುತ್ತಿದೆ. ಶವ ಸುಟ್ಟಾಗ ಬರುವ ಕೆಟ್ಟ ವಾಸನೆಯಿಂದ ಊಟ ಮಾಡುವುದಕ್ಕೂ ಆಗುವುದಿಲ್ಲ.
ಈ ಕುರಿತು ಸಾಕಷ್ಟು ಬಾರಿ ಶಾಸಕ ಹಾಗೂ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಮುಂದಾದರೂ ಸಮಸ್ಯೆ ಪರಿಹರಿಸದಿದ್ದರೇ ಪ್ರತಿಭಟನೆ ಮಾಡುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.