ಕರ್ನಾಟಕ

karnataka

ETV Bharat / state

ಹೈಫೈ ಜೀವನಕ್ಕಾಗಿ ಕಳ್ಳತನ: 12 ಬುಲೆಟ್​ ಎಗರಿಸಿ ಸಿಕ್ಕಿಬಿದ್ದ ಬಿಟೆಕ್ ವಿದ್ಯಾರ್ಥಿಗಳು

ಹೈಫೈ ಜೀವನಕ್ಕಾಗಿ ಬೈಕ್ ಕದ್ದು ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ರಾಯಲ್ ಎನ್‍ಫೀಲ್ಡ್ ಬುಲೆಟ್​ ಸೇರಿ 15 ವಾಹನ ವಶಕ್ಕೆ ಪಡೆಯಲಾಗಿದೆ.

ಸ

By

Published : Aug 12, 2022, 11:25 AM IST

ಬಾಗೇಪಲ್ಲಿ(ಚಿಕ್ಕಬಳ್ಳಾಪುರ):ಪಟ್ಟಣದ ಹೊರವಲಯದ ಟೋಲ್‍ಪ್ಲಾಜಾ ಬಳಿ ದ್ವಿಚಕ್ರ ವಾಹನ ಕಳ್ಳರನ್ನು ಪೊಲೀಸರು ಬಂಧಿಸಿ, 12 ಬುಲೆಟ್ ವಾಹನಗಳು ಸೇರಿದಂತೆ 15 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅನುಮಾನಾಸ್ಪದವಾಗಿ ಬುಲೆಟ್ ದ್ವಿಚಕ್ರ ವಾಹನದಲ್ಲಿ ಓಡಾಡುತ್ತಿದ್ದ ಇಬ್ಬರು ಯುವಕರನ್ನು ಗಮನಿಸಿದ ಪೊಲೀಸರು, ನಿಲ್ಲಿಸಿ ವಿಚಾರಿಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ.

ಇಬ್ಬರು ಯುವಕರಲ್ಲಿ ಒಬ್ಬ ಚಿಕ್ಕಬಳ್ಳಾಪುರದ ಹಾಗೂ ಮತ್ತೊಬ್ಬ ಆಂಧ್ರಪ್ರದೇಶದ ಮೂಲದವ ಎಂದು ತಿಳಿದು ಬಂದಿದೆ. ಯುವಕರು ಬೆಂಗಳೂರಿನ ಬಿ.ಟೆಕ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅರ್ಧಕ್ಕೆ ತನ್ನ ವ್ಯಾಸಂಗ ನಿಲ್ಲಿಸಿದ ಒಬ್ಬ ವಿದ್ಯಾರ್ಥಿ ಶೋಕಿಗಾಗಿ ದಂಧೆಗೆ ಇಳಿದಿದ್ದ ಎನ್ನಲಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ, ಪಕ್ಕದ ಆಂಧ್ರ ಪ್ರದೇಶದ ಹಲವು ಗ್ರಾಹಕರಿಗೆ ಮಾರಿ, ಹಣ ಮಾಡಿಕೊಂಡು ಐಷಾರಾಮಿ ಜೀವನ ಮಾಡುತ್ತಿದ್ದರಂತೆ.

ಈವರೆಗೂ 12 ರಾಯಲ್ ಎನ್‍ಫೀಲ್ಡ್ ಬುಲೆಟ್​ ಸೇರಿ ಒಟ್ಟು 15 ವಾಹನಗಳನ್ನು ಕದ್ದಿರುವುದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ. ಪಟ್ಟಣದ ಪೊಲೀಸರು ಖದೀಮರಿಂದ ವಾಹನಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ಬಾದಾಮಿ: ಪತ್ನಿ ಜೊತೆ ಜಗಳ ಮಾಡಿದ ಯೋಧನ ಕೊಲೆ ಮಾಡಿದ ಬಾವ)

ABOUT THE AUTHOR

...view details