ಚಿಕ್ಕಬಳ್ಳಾಪುರ: ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ತಾಲೂಕಿನ ಜನತೆ ಈ ಬಾರಿಯ ಬಿಎಸ್ವೈ ಸರ್ಕಾರದ ಬಜೆಟ್ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.
ವ್ಯಾಪಾರ ವಹಿವಾಟಿನ ಜೊತೆಗೆ ನೆರೆ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿರುವುದಿಂದ ಚಿಂತಾಮಣಿ ತಾಲೂಕಿನ ಜನತೆಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಸದ್ಯ ಇತ್ತಿಚೇಗಷ್ಟೆ ಹೆಚ್‌ಎನ್ ವ್ಯಾಲಿ ನೀರು ಚಿಕ್ಕಬಳ್ಳಾಪುರ ಜಿಲ್ಲೆಗೆ ಬಂದಿದ್ರೂ, ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಚಿಂತಾಮಣಿ ತಾಲೂಕನ್ನು ರಾಜ್ಯ ಸರ್ಕಾರ ದೂಷಿಸುತ್ತಿದೆ ಎಂದು ರೈತ ಸಂಘಟನೆಗಳು ಈಗಾಗಲೇ ಬೇಸರ ವ್ಯಕ್ತಪಡಿಸಿವೆ.
ಚಿಂತಾಮಣಿ ಜನತೆ ನಿರೀಕ್ಷೆಗಳಿಗೆ ಬಿಎಸ್ವೈ ಸರ್ಕಾರ ಕೊಡಲಿದೆಯಾ ಅನುಧಾನದ ಬುತ್ತಿ ಇನ್ನೂ ನೀರಾವರಿ ಯೋಜನೆಗಳು, ರಸ್ತೆಗಳ ಅಭಿವೃದ್ದಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಿದರೆ ಗಡಿ ಭಾಗದ ಜನತೆಗೆ ಸಾಕಷ್ಟು ಸಂತಸವನ್ನು ತಂದು ಕೊಡುವಂತಾಗುತ್ತದೆ. ಸದ್ಯ ಕೆಸಿ ವ್ಯಾಲಿ ಯೋಜನೆಯಿಂದ ಚಿಂತಾಮಣಿ ತಾಲೂಕಿಗೆ ಸಾಕಷ್ಟು ಮೋಸವನ್ನು ಮಾಡಲಾಗಿದ್ದು, ಈಗ ಎರಡನೇ ಹಂತದಲ್ಲಿ ನೀರನ್ನು ಬಿಡಲಾಗುವುದೆಂದು ತಿಳಿಸುತ್ತಿದ್ದಾರೆ. ಇನ್ನೂ ಹೆಚ್ ಎನ್ ವ್ಯಾಲಿ ನೀರಾವರಿ ಯೋಜನೆಯಿಂದ ಚಿಂತಾಮಣಿ ತಾಲೂಕನ್ನು ಕಡೆಗಣಿಸಿದ್ದಾರೆ. ಶಾಸಕರ ಗಮನಕ್ಕೆ ತಂದರೆ ಎರಡನೇ ಹಂತದಲ್ಲಿ ಬರಲಾಗುವುದೆಂದು ತಿಳಿಸುತ್ತಿದ್ದಾರೆ.
ಆದರೆ, ಇವುಗಳ ಬಗ್ಗೆ ನಂಬಿಕೆ ಇಲ್ಲ ಎಂದು ರೈತ ಸಂಘದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ತಾಲೂಕಿಗೆ ನೀರಾವರಿ ಯೋಜನೆಗಳು ಕನಸಾಗಿಯೇ ಇದೆ. ಒಂದು ಕಡೆ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಂದ ಯಾವುದೇ ಪ್ರಯೋಜನವಾಗದ ಕಾರಣ ಚಿಂತಾಮಣಿ ತಾಲೂಕನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಣೆ ಮಾಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಇನ್ನೂ ಕೋಲ್ಡ್ ಸ್ಟೋರೇಜ್ಗಳನ್ನು ಹೋಬಳಿ ಮಟ್ಟದಲ್ಲಿ ತೆರೆದರೆ ರೈತರಿಗೆ ಅನುಕೂಲವಾಗಲಿದೆ. ಬರಗಾಲದಲ್ಲಿ ರೈತರಿಗೆ 25 ಸಾವಿರ ಬರಪರಿಹಾರ ಘೋಷಣೆ ಮಾಡಬೇಕು. ಸ್ವಾಮಿನಾಥ್‌ನ್ ವರದಿಯನ್ನು ಜಾರಿಗೊಳಿಸಬೇಕು. ಅದೇ ರೀತಿ ಚಿಂತಾಮಣಿ ತಾಲೂಕಿನ ಕೆರೆಗಳಿಗೆ ನೀರನ್ನು ತುಂಬಿಸುವ ಬಜೆಟ್ ಮಂಡನೆ ಮಾಡಬೇಕೆಂದು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.