ಕರ್ನಾಟಕ

karnataka

ETV Bharat / state

ಅಬ್ಬಬ್ಬಾ..! ಇದೇನು ಪ್ರೀತಿನೋ ಹುಚ್ಚು ಪ್ರೀತಿನೋ: ಬರ್ಥ್‌ ಡೇ ವಿಶ್ ಮಾಡಿಲ್ಲವೆಂದು ಯುವಕ ಸುಸೈಡ್​​ - ಚಿಕ್ಕಬಳ್ಳಾಪುರ ಯುವಕ ಆತ್ಮಹತ್ಯೆ ಸುದ್ದಿ

ಹುಟ್ಟುಹಬ್ಬದ ದಿನ ಪ್ರಿಯತಮೆ ವಿಶ್​​ ಮಾಡಲಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

boy-suicide-in-chikkaballapur
ಬರ್ಥ್‌ ಡೇ ವಿಶ್ ಮಾಡಿಲ್ಲವೆಂದು ಆತ್ಮಹತ್ಯೆಗೆ ಶರಣಾದ ಯುವಕ

By

Published : Feb 28, 2020, 8:56 PM IST

ಚಿಕ್ಕಬಳ್ಳಾಪುರ : ಹುಟ್ಟುಹಬ್ಬದ ದಿನ ಪ್ರಿಯತಮೆ ವಿಶ್ ಮಾಡಲಿಲ್ಲ ಎಂದು ಮನನೊಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಂಡಹಳ್ಳಿ ಗ್ರಾಮದ ಶಿವಕುಮಾರ್ (27) ಆತ್ಮಹತ್ಯೆಗೆ ಶರಣಾದ ಯುವಕ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಿವಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಕಾರು ಚಾಲಕನಾಗಿದ್ದ ಶಿವಕುಮಾರ್ ಬೆಂಗಳೂರು ಮೂಲದ ಯುವತಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕೆಲ ದಿನಗಳಿಂದ ಯುವತಿ ಶಿವಕುಮಾರ್ ಜೊತೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಆದರೂ ಫೆಬ್ರವರಿ 26ರ ಹುಟ್ಟುಹಬ್ಬಕ್ಕೆ ಪ್ರಿಯತಮೆ ಕರೆ ಮಾಡುತ್ತಾಳೆ ಎಂಬ ನಂಬಿಕೆಯಿಂದ ಇದ್ದ, ಪ್ರಿಯತಮೆ ಮಾತ್ರ ವಿಶ್ ಮಾಡದ ಕಾರಣ, ಮನನೊಂದ ಶಿವಕುಮಾರ್, ನನ್ನ ಸಾವಿಗೆ ಯಾರೂ ಕಾರಣರಲ್ಲ. ಸಾವಿಗೆ ಆ ಯುವತಿ ಸಹ ಕಾರಣವಲ್ಲ. ಆಕೆಗೆ ಏನೂ ಮಾಡಬೇಡಿ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details