ಚಿಕ್ಕಬಳ್ಳಾಪುರ:ನಾಯಿಗಳ ದಾಳಿಗೆ ಸಿಲುಕಿ 11 ವರ್ಷದ ಬಾಲಕ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಿಡ್ಲಘಟ್ಟ ನಗರದ ಸಂತೋಷ ಬಡಾವಣೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶಿಡ್ಲಘಟ್ಟದ ಉರ್ದು ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ ಖಲಂದರ್ ಖಾನ್ (10) ಎಂಬಾತ ಮೃತ ಬಾಲಕ. ತಂದೆ ಕೂಲಿಗಾಗಿ ಹೊರಗೆ ಹೋದಾಗ ಬಾಲಕ ಮನೆಯಿಂದ ಹೊರಗಡೆ ಬಂದಿದ್ದ. ಈ ವೇಳೆ 20ಕ್ಕೂ ಅಧಿಕ ನಾಯಿಗಳು ದಾಳಿ ನಡೆಸಿದ್ದು, ಆತನ ಮೈ ಮೇಲೆ ಬಟ್ಟೆಯೂ ಉಳಿದಿರಲಿಲ್ಲ. ತಲೆ, ಮೈ, ಕೈ ಸೇರಿದಂತೆ ಎಲ್ಲೆಡೆ ನಾಯಿಗಳು ಕಚ್ಚಿ ಗಾಯಗೊಳಿಸಿದ್ದವು.