ಚಿಂತಾಮಣಿ: ಶುಕ್ರವಾರ ನಡೆದ ವಿಧಾನ ಪರಿಷತ್ ಚುನಾವಣೆ ಮತದಾನದ ವೇಳೆ ಮತಗಟ್ಟೆ ಅಧಿಕಾರಿಗಳು ಮತದಾರರು ಸಹಿ ಹಾಕಿದ ಬ್ಯಾಲೆಟ್ ಪೇಪರ್ ಅನ್ನು ಮತ ಪೆಟ್ಟಿಗೆಗೆ ಹಾಕಿದ ಆರೋಪ ಪ್ರಕರಣ ಚಿಂತಾಮಣಿ ನಗರದಲ್ಲಿ ನಡೆದಿದೆ.
ಸಹಿ ಸಮೇತ ಬ್ಯಾಲೆಟ್ ಪೇಪರ್ ಮತಪೆಟ್ಟಿಗೆಗೆ ಹಾಕಿಸಿದ ಆರೋಪ.. ಮತಗಟ್ಟೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ - ವಿಧಾನ ಪರಿಷತ್ ಚುನಾವಣೆ ಮತದಾನ
ಚಿಂತಾಮಣಿ ನಗರದ ನಗರಸಭೆ ಮತಗಟ್ಟೆಯಲ್ಲಿ ನಿನ್ನೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಮತ ಚಲಾಯಿಸುವ ವೇಳೆ ಮತಗಟ್ಟೆ ಅಧಿಕಾರಿಗಳು, ಮತದಾರರು ಸಹಿ ಹಾಕಿದ ಬ್ಯಾಲೆಟ್ ಪೇಪರ್ ಅನ್ನು ಮತ ಪೆಟ್ಟಿಗೆಗೆ ಹಾಕಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಚಿಂತಾಮಣಿ ನಗರದ ನಗರಸಭೆ ಮತಗಟ್ಟೆಯಲ್ಲಿ ಮತ ಚಲಾಯಿಸುವ ವೇಳೆ ಮತಗಟ್ಟೆ ಅಧಿಕಾರಿಗಳು, ಮತದಾರರು ಸಹಿ ಹಾಕಿದ ಕೌಂಟರ್ ಪ್ರತಿಯನ್ನು ತಮ್ಮ ಬಳಿ ಇಟ್ಟುಕೊಂಡು ಅಭ್ಯರ್ಥಿಗಳ ಭಾವ ಚಿತ್ರವಿರುವುದನ್ನು ಮಾತ್ರ ಕೊಡಬೇಕು. ಆದರೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ಮತದಾರರ ಸಹಿ ಸಮೇತ ಬ್ಯಾಲೆಟ್ ಪೇಪರ್ ಅನ್ನು ಮತಪೆಟ್ಟಿಗೆಗೆ ಹಾಕಿಸಿದರು ಎನ್ನಲಾಗ್ತಿದೆ. ಇದರಿಂದ ಆಕ್ರೋಶಗೊಂಡ ಮತದಾರರು ಹಾಗೂ ಶಾಸಕ ಎಂ ಕೃಷ್ಣರೆಡ್ಡಿ, ಮತಗಟ್ಟೆ ಬಳಿ ಪ್ರತಿಭಟನೆ ನಡೆಸಿದರು.
ಈ ಕುರಿತು ಮಾಹಿತಿ ತಿಳಿದ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.