ಚಿಕ್ಕಬಳ್ಳಾಪುರ:ಕಾಂಗ್ರೆಸ್ ಪಕ್ಷದ ವಿರುದ್ಧ ಬೊಮ್ಮಾಯಿ ಸರ್ಕಾರ ವಿರಾಟ್ ಕೊಹ್ಲಿಯಂತೆ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದೆ ಎಂದು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ, ಸುರಪುರ ಶಾಸಕ ರಾಜುಗೌಡ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಏರ್ಪಡಿಸಿದ್ದ, ಪರಿಶಿಷ್ಟ ಪಂಗಡಗಳ ಪೂರ್ವಭಾವಿ ಸಭೆಯಲ್ಲಿ ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್ ಸೇರಿದಂತೆ ಜಿಲ್ಲೆಯ ಮಾಜಿ ಶಾಸಕರು, ಮುಖಂಡರು ಭಾಗಿಯಾದ್ದರು. ಇದೇ ವೇಳೆ ಮಾತನಾಡಿದ ನಿಗಮಮಂಡಳಿ ಅಧ್ಯಕ್ಷ ರಾಜೀವ್, ಕಾಂಗ್ರೆಸ್ನವರ ಪ್ರಕಾರ ಯಾರು ಜನಸೇವೆ ಮಾಡುತ್ತಾರೋ ಅವರೆಲ್ಲಾ ಪೆದ್ದರು ಎಂದು ಹೇಳುವ ಮೂಲಕ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪಕ್ಕೆ ಟಾಂಗ್ ಕೊಟ್ಟರು.
ಬಿಜೆಪಿಗೆ ಹೋಗಬೇಕಾದ್ರೆ, ಅದು ಬ್ರಾಹ್ಮಣರ ಪಕ್ಷ ಎಂದು ಹೇಳಿಕೊಟ್ಟರು. ಆದರೆ 55 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷದ ಸೇವೆ ಏನು ಎಂಬುದನ್ನು ಶಾಸಕ ರಾಜುಗೌಡ ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಬಂದ ನಂತರ ಪರಿಶಿಷ್ಟ ಪಂಗಡಗಳಿಗೆ ಮಾರ್ಯಾದೆ ಕೊಡುತ್ತಿದ್ದಾರೆ. ಶ್ರೀರಾಮಲು ಸೇರಿದಂತೆ ಸಾಕಷ್ಟು ಜನರಿಗೆ ರಾಜಕೀಯವಾಗಿ ಬೆಳೆಯಲು ಅವಕಾಶವನ್ನು ಮಾಡಿಕೊಟ್ಟಿದೆ ಎಂದು ಹೇಳಿದರು.
ಇದನ್ನೂ ಓದಿ:ಬಿಜೆಪಿ ಸರ್ಕಾರ ಜಾತಿ, ಧರ್ಮಗಳ ನಡುವೆ ಕಿತ್ತಾಟ ಮಾಡಿಸುತ್ತಿದೆ: ವೀರಪ್ಪ ಮೊಯ್ಲಿ
ಇನ್ನು, ಸಿಎಂ ಬಸವರಾಜ ಬೊಮ್ಮಾಯಿ ವಿರಾಟ್ ಕೊಹ್ಲಿಯಂತೆ ಕಾಂಗ್ರೆಸ್ ಪಕ್ಷದ ವಿರುದ್ಧ ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಾಣಕ್ಕೆ ಮತ್ತೊಮ್ಮೆ ಯಾರೇ ಪಕ್ಷದಲ್ಲಿ ನಿಂತುಕೊಂಡರು ಅವರಿಗೆ ಮತಗಳನ್ನು ಕೊಟ್ಟು ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕೆಂದು ಕಾರ್ಯಕರ್ತರಿಗೆ ಕರೆಕೊಟ್ಟರು.