ಚಿಕ್ಕಬಳ್ಳಾಪುರ:ಡಿ.ಕೆ.ಶಿವಕುಮಾರ್ ಅವರ ಇಡಿ ಬಂಧನ ಹಾಗು ಒಕ್ಕಲಿಗರ ಸಮುದಾಯದ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಸಂಸದ ಬಚ್ಚೇಗೌಡ ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ರು.
ಬಿಜೆಪಿ ಜಾತಿ ದ್ವೇಷ, ಜಾತಿ ರಾಜಕಾರಣ ಮಾಡುವುದಿಲ್ಲ: ಸಂಸದ ಬಚ್ಚೇಗೌಡ ಪ್ರತಿಕ್ರಿಯೆ - ಜಾತಿ ರಾಜಕಾರಣ
ರಾಜಕಾರಣ ಎನ್ನುವುದು ಒಂದು ಜಾತಿಗೆ ಸೀಮಿತವಾಗಬಾರದು, ರಾಜಕಾರಣದಲ್ಲಿ ಎಲ್ಲಾ ಜಾತಿಯವರು ಬೇಕಾಗುತ್ತಾರೆ. ಕೇವಲ ಒಂದು ಸಮುದಾಯವನ್ನು ಸೇರಿಸಿ ರಾಜಕಾರಣ ಮಾಡುವುದು ಸರಿಯಲ್ಲ.ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಬಿಜೆಪಿ ಜಾತಿ ರಾಜಕಾರಣ ಮಾಡುವುದಿಲ್ಲ ಎಂದು ಸಂಸದ ಬಚ್ಚೇ ಗೌಡ ಹೇಳಿದ್ರು.
ಜಿಲ್ಲಾಡಳಿತ ಭವನಲ್ಲಿ ನೂತನ ಕೊಠಡಿ ಉದ್ಘಾಟನೆ ವೇಳೆ ಕ್ಷೇತ್ರದ ಸಂಸದ ಬಚ್ಚೇಗೌಡ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿ ಪಕ್ಷ ಯಾವುದೇ ಕಾರಣಕ್ಕೂ ಜಾತಿ ಮತ್ತು ದ್ವೇಷದ ರಾಜಕಾರಣ ಮಾಡುವುದಿಲ್ಲ. ರಾಜಕಾರಣ ಎನ್ನುವುದು ಒಂದು ಜಾತಿಗೆ ಸೀಮಿತವಾಗಬಾರದು. ರಾಜಕಾರಣದಲ್ಲಿ ಎಲ್ಲಾ ಜಾತಿಯವರು ಬೇಕಾಗುತ್ತಾರೆ. ಕೇವಲ ಒಂದು ಸಮುದಾಯವನ್ನು ಸೇರಿಸಿ ರಾಜಕಾರಣ ಮಾಡುವುದು ಸರಿಯಲ್ಲ.ಇದರಿಂದ ತಪ್ಪು ಸಂದೇಶ ಹೋಗುತ್ತದೆ. ಇದೆಲ್ಲಾ ಸರಿ ಕಾಣುವುದಿಲ್ಲ ಎಂದರು.
ಚಿದಂಬರಂ ಈಗಲೂ ಜೈಲಿನಲ್ಲಿದ್ದು, ಯಾರು ಏನು ಮಾಡಲೂ ಸಾಧ್ಯವಿಲ್ಲ. ಬಿಜೆಪಿ ಪಕ್ಷದ ಮೇಲೆ ಸುಮ್ಮನೆ ಆರೋಪ ಮಾಡುವುದು ಸರಿಯಿಲ್ಲ. ಅವರೇ ಮಾಡಿರುವ ಆರೋಪಗಳಿಂದ ಸಿಕ್ಕಿ ಹಾಕಿಕೊಂಡಿದ್ದಾರೆ. ದೇಶದ ಕಾನೂನಿಗೆ ಗೌರವ ಕೊಡಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ, ಆಯಾ ಸಂಸ್ಥೆ ಅವರ ಕೆಲಸ ಮಾಡುತ್ತದೆ. ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳು ಸ್ವಯುತ್ತ ಸಂಸ್ಥೆಗಳು. ಯಾರ ಅಡಿಯಲ್ಲೂ ಕೆಲಸ ಮಾಡಲ್ಲ ಎಂದು ಗುಡುಗಿದ್ರು.