ಚಿಕ್ಕಬಳ್ಳಾಪುರ: ಟಿಪ್ಪು ಜಯಂತಿ ಆಚರಣೆ ಬಗ್ಗೆ ಸಾಕಷ್ಟು ಪರ-ವಿರೋಧ ಕೇಳಿ ಬರುತ್ತಿದೆ. ಆದರೂ ಭಾರತೀಯ ಜನತಾ ಪಕ್ಷ ಮಾತ್ರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ಕಾರಣಕ್ಕೂ ನಾವು ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲವೆಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಬಿಜೆಪಿ ನಾಯಕರು ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಿಸಲ್ಲ.. ಡಿಸಿಎಂ ಅಶ್ವತ್ಥ್ ನಾರಾಯಣ - ಅಶ್ವತ್ಥ ನಾರಾಯಣ ಟಿಪ್ಪು ಜಯಂತಿ ಆಚರಣೆ ಸುದ್ದಿ
ಟಿಪ್ಪು ಜಯಂತಿ ಆಚರಣೆ ಬಗ್ಗೆ ಸಾಕಷ್ಟು ಪರ-ವಿರೋಧ ಕೇಳಿ ಬರುತ್ತಿದೆ. ಆದರೂ ಭಾರತೀಯ ಜನತಾ ಪಕ್ಷ ಮಾತ್ರ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ಕಾರಣಕ್ಕೂ ನಾವು ಆಚರಣೆ ಮಾಡುವುದಿಲ್ಲವೆಂದು ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಬಿಜೆಪಿ ಪಕ್ಷದಲ್ಲಿ ಯಾವುದೇ ನಾಯಕರು ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದಿಲ್ಲ. ಸರ್ಕಾರದಿಂದಲೂ ಸಹ ಯಾವುದೇ ಕಾರಣಕ್ಕೂ ಟಿಪ್ಪು ಜಯಂತಿ ಆಚರಣೆ ಮಾಡುವುದಿಲ್ಲ. ಮಾಡುವವರೆಲ್ಲ ಬಿಜೆಪಿ ನಾಯಕರಲ್ಲಾ ಎಂದು ಇಂದು ನೇರ ಉತ್ತರ ನೀಡಿದ್ದಾರೆ.
ಇನ್ನು, ಕಳೆದ ನಾಲ್ಕು ದಿನಗಳ ಹಿಂದೆ ಬಿಜೆಪಿ ಮುಖಂಡ ಶರತ್ ಬಚ್ಚೇಗೌಡ ಅವರು ಟಿಪ್ಪು ಜಯಂತಿಯ ಬಗ್ಗೆ ಹೇಳಿಕೆ ನೀಡಿರೋದು ಸಾಕಷ್ಟು ವೈರಲ್ ಆಗಿತ್ತು. ನನಗೆ ಕೆಲವರು ಟಿಪ್ಪು ಜಯಂತಿ ಆಚರಣೆ ಮಾಡದಂತೆ ಹೇಳಿದ್ರು. ನಾನು ಟಿಪ್ಪು ಜಯಂತಿಯನ್ನು ಅದ್ಧೂರಿಯಾಗಿ ಮಾಡುತ್ತೇನೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ ಖಡಕ್ ಉತ್ತರ ನೀಡಿ, ಬಿಜೆಪಿ ಪಕ್ಷದ ಯಾವ ನಾಯಕರು ಆಚರಣೆ ಮಾಡುವುದಿಲ್ಲ. ಆಚರಣೆ ಮಾಡುವವರು ನಮ್ಮವರಲ್ಲಾ ಎಂಬ ಹೇಳಿಕೆ ನೀಡಿದ್ದಾರೆ. ಹಾಗಾಗಿ ಒಂದೇ ಪಕ್ಷದ ನಾಯಕರಲ್ಲಿ ಟಿಪ್ಪು ಜಯಂತಿ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುತ್ತಿದೆ.