ಚಿಕ್ಕಬಳ್ಳಾಪುರ: ಕೋಲಾರ ಲೋಕಸಭಾ ಕ್ಷೇತ್ರದದಲ್ಲಿ ನಿರ್ಣಾಯಕ ಪಾತ್ರವನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಕ್ಷೇತ್ರಕ್ಕೆ ಇಂದು ಸಂಸದ ಎಸ್ ಮುನಿಸ್ವಾಮಿ ಭೇಟಿ ನೀಡಿದ್ದು, ಮುರಗಮಲ್ಲಾ ಗ್ರಾಮದಲ್ಲಿ ಸ್ವಂತ ಹಣದಿಂದ ಬೋರ್ವೆಲ್ ಕೊರೆಸಿದ್ದಾರೆ.
ಬಿಜೆಪಿ ಪಕ್ಷದ ಬುಡ ಗಟ್ಟಿಯಾಗಿದೆ: ಸಂಸದ ಎಸ್ ಮುನಿಸ್ವಾಮಿ - ಸಂಸದ ಎಸ್ ಮುನಿಸ್ವಾಮಿ
ಬಿಜೆಪಿ ಪಕ್ಷದ ಬುಡ ಬಹಳ ಗಟ್ಟಿಯಾಗಿದೆ, ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಸಂಸದ ಎಸ್. ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ರು.
ಸಂಸದ ಎಸ್ ಮುನಿಸ್ವಾಮಿ
ಸಂಸದ ಎಸ್ ಮುನಿಸ್ವಾಮಿ ಈಗಾಗಲೇ ಎರಡು ಬೋರ್ವೆಲ್ ಗಳನ್ನು ಕೊರೆಯಿಸಿದ್ದು, ನೀರಿನ ಅಭಾವವಿರುವ ಗ್ರಾಮಗಳಲ್ಲಿಯೂ ಕೊರೆಯಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಇನ್ನೂ ನರೇಂದ್ರ ಮೋದಿಯವರ ಆಡಳಿತ ನೂರು ದಿನಗಳ ಅಧಿಕಾರ ಪೂರೈಸುತ್ತಿದ್ದು, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ರು.