ಚಿಕ್ಕಬಳ್ಳಾಪುರ: ಕಬ್ಬಡ್ಡಿ ಪಂದ್ಯಾವಳಿಯ ಆಹ್ವಾನ ಪತ್ರಿಕೆಯಲ್ಲಿ ಬಿಜೆಪಿ ಸಂಸದ ಬಚ್ಚೇಗೌಡರ ಹೆಸರನ್ನು ಕಡೆಗಣಿಸಿ ಪಟ್ಟಿಯ ಕೊನೆಯಲ್ಲಿ ಮುದ್ರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪಂದ್ಯಾವಳಿಗೆ ಬಹಿಷ್ಕಾರ ಮಾಡುವುದಾಗಿ ತಿಳಿಸಿದ್ದಾರೆ.
ನಾಳೆ ನಡೆಯುವ ಬೆಂಗಳೂರು ವಿಭಾಗ ಮಟ್ಟದ ಕಬ್ಬಡಿ ಪಂದ್ಯಕ್ಕೆ ಬಿಜೆಪಿ ಬಹಿಷ್ಕಾರ - chikkaballapura news
ನಾಳೆ ಗುಡಿಬಂಡೆಯಲ್ಲಿ ನಡೆಯುವ ಬೆಂಗಳೂರು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪಂದ್ಯಾವಳಿಯನ್ನು ಬಿಜೆಪಿ ಬಹಿಷ್ಕರಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಡಿಬಂಡೆ ಬಿಜೆಪಿ ಕಾರ್ಯದರ್ಶಿ ನಾಗರಾಜ್, ನಾಳೆಯಿಂದ ನಡೆಯುವ ಬೆಂಗಳೂರು ಮಟ್ಟದ ಕಬ್ಬಡಿ ನಮ್ಮ ಹಿಂದುಳಿದ ತಾಲೂಕಿನಲ್ಲಿ ಮಾಡುತ್ತಿರುವುದು ನಮ್ಮ ತಾಲೂಕಿನವರಿಗೆ ಸಂತೋಷ. ಆದರೆ, ಅಧಿಕಾರಿಗಳು ನಮ್ಮ ಲೋಕಸಭಾ ಸದಸ್ಯ ಬಿ.ಎನ್. ಬಚ್ಚೇ ಗೌಡರ ಹೆಸರು ಕಡೆಯಾದಾಗಿ ಆಹ್ವಾನ ಪತ್ರಿಕೆಯಲ್ಲಿ ಪ್ರಿಂಟ್ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು
ಹಿಂದುಳಿದ ತಾಲೂಕಿನಲ್ಲಿ ಪ್ರಥಮ ಭಾರಿಗೆ ಆಯೋಜಿಸಿದ್ದ ಬೆಂಗಳೂರು ವಿಭಾಗ ಮಟ್ಟದ ಹಿರಿಯ ಮತ್ತು ಪ್ರಾಥಮಿಕ ಮಟ್ಟದ ಕಬ್ಬಡಿಯ ಪಂದ್ಯಾವಳಿಗೆ ಆವರಣ ಸಿದ್ಧವಾಗಿದೆ. ಆದರೆ, ಕಾರ್ಯಕ್ರಮಕ್ಕೆ ಅಧಿಕಾರಿಗಳು ಮಾಡಿದ ತಪ್ಪು ಮತ್ತು ನಿರ್ಲಕ್ಷದಿಂದಾಗಿ ಬಿಜೆಪಿ ಬಹಿಷ್ಕಾರ ಮಾಡಿದೆ ಎಂದು ತಾಲೂಕಿನ ಬಿಜೆಪಿ ಕಾರ್ಯಕರ್ತರು ಹೇಳಿದರು.