ಕರ್ನಾಟಕ

karnataka

ETV Bharat / state

ಹಕ್ಕಿಜ್ವರದ ಭೀತಿ ಮಧ್ಯೆ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪ್ರತ್ಯಕ್ಷ - ಚಿಕ್ಕಬಳ್ಳಾಪುರದ ಕಣಿತಹಳ್ಳಿ ಬಳಿ ಐದು ಸಾವಿರ ಕೋಳಿ ಮರಿಗಳು ಪತ್ತೆ

ಕಣಿತಹಳ್ಳಿ ಬಳಿಯ ಮೀಸಲು ಅರಣ್ಯಪ್ರದೇಶಕ್ಕೆ ಯಾರೋ ಐದು ಸಾವಿರಕ್ಕೂ ಅಧಿಕ ಫಾರಂ ಕೋಳಿ ಮರಿಗಳನ್ನು ರಾತ್ರೋರಾತ್ರಿ ತಂದು ಬಿಟ್ಟಿದ್ದು, ಮರಿಗಳ ಚಿಲಿಪಿಲಿ ಸದ್ದಿಗೆ ಸ್ಥಳೀಯರು ಕಾಡಿಗೆ ದೌಡಾಯಿಸಿದ್ದು, ಮರಿಗಳನ್ನು ತಗೆದುಕೊಳ್ಳಲು ಮುಗಿಬಿದಿದ್ದಾರೆ.

chiken
chiken

By

Published : Jan 9, 2021, 1:45 PM IST

ಚಿಕ್ಕಬಳ್ಳಾಪುರ: ಇದ್ದಕ್ಕಿದ್ದಂತೆ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಮುಗಿಬಿದ್ದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊರವಲಯದ ಕಾಡಿನಲ್ಲಿ ಕಂಡು ಬಂದಿದೆ.
ಕಣಿತಹಳ್ಳಿ ಬಳಿಯ ಮೀಸಲು ಅರಣ್ಯಪ್ರದೇಶಕ್ಕೆ ಯಾರೋ ಐದು ಸಾವಿರಕ್ಕೂ ಅಧಿಕ ಫಾರಂ ಕೋಳಿ ಮರಿಗಳನ್ನು ರಾತ್ರೋರಾತ್ರಿ ತಂದು ಬಿಟ್ಟಿದ್ದು, ಮರಿಗಳ ಚಿಲಿಪಿಲಿ ಸದ್ದಿಗೆ ಸ್ಥಳೀಯರು ಕಾಡಿಗೆ ದೌಡಾಯಿಸಿದ್ದು, ಮರಿಗಳನ್ನು ತಗೆದುಕೊಳ್ಳಲು ಮುಗಿಬಿದಿದ್ದಾರೆ.

ಕಾಡಿನಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿ ಮರಿಗಳು ಪ್ರತ್ಯಕ್ಷ
ಸದ್ಯ ಜಿಲ್ಲೆಯಲ್ಲೂ ಹಕ್ಕಿ ಜ್ವರದ ಬಗ್ಗೆ ಸಾಕಷ್ಟು ವದಂತಿಗಳು ಕೇಳಿ ಬರುತ್ತಿವೆ. ಇದರ ಬೆನ್ನಲೇ ಕಣಿತಹಳ್ಳಿ ಸುತ್ತ ಮುತ್ತಲಿನ ಗ್ರಾಮಸ್ಥರು ಕೋಳಿ ಮರಿಗಳನ್ನು ಕಂಡು ದಿಗ್ಭ್ರಮೆಗೆ ಒಳಗಾಗಿದ್ದಾರೆ. ಹಕ್ಕಿ ಜ್ವರ ಭೀತಿ ಹಿನ್ನೆಲೆ ಆಂಧ್ರಪ್ರದೇಶ ಅಥವಾ ತಮಿಳುನಾಡು ಭಾಗದಿಂದ ಕಿಡಿಗೇಡಿಗಳು ರಾತ್ರೋರಾತ್ರಿ ತಂದು ಕಾಡಿನಲ್ಲಿ ಬಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ.

ABOUT THE AUTHOR

...view details