ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರದಲ್ಲಿ ಡಾ. ಕೆ ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ.. - byke rally in chikballapur latest news

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್​​ ಪರ ಸ್ವಯಂ ಪ್ರೇರಿತ ಬೈಕ್ ರ್ಯಾಲಿ ನಡೆಸಿದ್ದಾರೆ.

rally
ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ

By

Published : Dec 3, 2019, 4:46 PM IST

ಚಿಕ್ಕಬಳ್ಳಾಪುರ:ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್​​ಗೆ ಬೆಂಬಲ ನೀಡಿ ಬಿಜೆಪಿ ಕಾರ್ಯಕರ್ತರು ಸ್ವಯಂ ಪ್ರೇರಿತ ಬೃಹತ್​​ ಬೈಕ್ ಜಾಥಾ ಕೈಗೊಂಡಿದ್ರು.

ಜಾಲಾರಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದಿಂದ ಚಿಕ್ಕಬಳ್ಳಾಪುರ ನಗರದವರೆಗೂ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, 2000 ಸಾವಿರಕ್ಕೂ ಅಧಿಕ ದ್ವಿಚಕ್ರ ವಾಹನಗಳ ಸವಾರರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಸುಧಾಕರ್, ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಈ ಬೈಕ್ ರ್ಯಾಲಿಗೆ ಸಾಥ್ ನೀಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಾ. ಕೆ ಸುಧಾಕರ್​​ ಪರ ಬೃಹತ್​​ ಬೈಕ್​ ಜಾಥಾ..

ಸಿದ್ದರಾಮಯ್ಯ ನಾಯಕರಾದವರು ಹಿರಿತನಕ್ಕೆ ತಕ್ಕಂತೆ ವರ್ತಿಸಬೇಕು. ಆಧಾರರಹಿತ ನಿಂದನೆ ಮಾಡುವುದು ಶೋಭೆ ತರುವುದಿಲ್ಲ. ಫಲಿತಾಂಶದ ನಂತರ ಜನತೆಗೆ ಸತ್ಯ ಹೇಳಲಾಗುವುದೆಂದು ಡಾ. ಸುಧಾಕರ್​​ ತಿಳಿಸಿದ್ರು. ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ ಮೋಸ ಮಾಡಿದೆ. ಬಿಜೆಪಿ ಅಭಿವೃದ್ದಿ ಮಾಡಿದೆ, ಯಾವುದಕ್ಕೆ ಮತ ಕೊಡಬೇಕೋ ಜನತೆಗೆ ಗೊತ್ತು ಎಂದ್ರು. ಈ ವೇಳೆ ಮಾತನಾಡಿದ ಶಾಸಕ ಗೂಳಿಹಟ್ಟಿ ಶೇಖರ್, ಸ್ವಯಂ ಪ್ರೇರಿತವಾಗಿ ಸಾವಿರಾರು ಬೈಕ್ ಸವಾರರು ಜಾಥಾ ಹಮ್ಮಿಕೊಂಡಿದ್ದು, ಇದಕ್ಕೆ ಚಾಲನೆ ನೀಡಲಾಗುತ್ತಿದೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರವನ್ನು ಸಂಪೂರ್ಣ ಕೇಸರಿಮಯವಾಗಿ ಮಾಡಲಾಗುತ್ತೆ ಎಂದ್ರು. ಚುನಾವಣೆಯಲ್ಲಿ ಸುಧಾಕರ್ 40 ಸಾವಿರ ಮತಗಳಿಂದ ಗೆಲ್ಲಲ್ಲಿದ್ದಾರೆ ಎಂದು ಭವಿಷ್ಯ ನುಡಿದ್ರು.

For All Latest Updates

TAGGED:

ABOUT THE AUTHOR

...view details