ಚಿಕ್ಕಬಳ್ಳಾರಪುರ: ಹಿಂಬದಿಯಿಂದ ಟ್ರ್ಯಾಕ್ಟರಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೊಸಹಳ್ಳಿ ಹಾಗೂ ವೈಜ್‌ಕೂರ್ ಬಳಿ ನಡೆದಿದೆ.
ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಯ್ಚಾರುವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘೋಡಂಪಲ್ಲಿ ನಿವಾಸಿ ಪವನ್(20) ಮತ್ತು ಕಾರ್ತಿಕ್(18) ಮೃತ ಯುವಕರು ಎಂದು ತಿಳಿದು ಬಂದಿದೆ.