ಚಿಕ್ಕಬಳ್ಳಾಪುರ: ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕು ಕಚೇರಿ ಮುಂಭಾಗ ನಡೆದಿದೆ.
ಚಿಕ್ಕಬಳ್ಳಾಪುರ| ತಾಯಿ ನೋಡಿ ಬೆಂಗಳೂರಿಗೆ ಹೋಗುವ ವೇಳೆ ಬೈಕ್ ಅಪಘಾತ: ಸ್ಥಳದಲ್ಲೇ ಸವಾರ ಸಾವು - ಮುಖಾಮುಖಿ ಡಿಕ್ಕಿ
ಟೆಂಪೋ ಹಾಗೂ ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಈತ ಕಳೆದ ರಾತ್ರಿ ತನ್ನ ತಾಯಿಯನ್ನು ನೋಡಲು ಊರಿಗೆ ಬಂದು ಮತ್ತೆ ವಾಪಸ್ ಆಗುತ್ತಿದ್ದ. ಮಾರ್ಗ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ.
ಸವಾರ ಸಾವು
ಟಿಪ್ಪು ನಗರ ನಿವಾಸಿ ಶಫಿವುಲ್ಲಾ (45) ಮೃತಪಟ್ಟವರು ಎಂದು ತಿಳಿದು ಬಂದಿದೆ. ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಈತ ಕಳೆದ ರಾತ್ರಿ ತನ್ನ ತಾಯಿಯನ್ನು ನೋಡಲು ಊರಿಗೆ ಬಂದು ಮತ್ತೆ ಬೆಂಗಳೂರಿಗೆ ವಾಪಸ್ ಹೋದ. ನಗರಕ್ಕೆ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಅಪಘಾತ ಸಂಭವಿಸಿದೆ.
ತಾಲೂಕು ಕಚೇರಿ ಮುಂಭಾಗ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.