ಚಿಕ್ಕಬಳ್ಳಾಪುರ:ಚಲಿಸುತ್ತಿದ್ದ ಬೈಕ್ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಹೆಂಡತಿಯ ಮುಂದೆಯೇ ಗಂಡ ಸಾವನ್ನಪ್ಪಿದ ಘಟನೆ ಗುಡಿಬಂಡೆ ಪಟ್ಟಣದ ಬಸ್ ನಿಲ್ದಾಣದ ಬಳಿ ನಡೆದಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪೀಲೇರು ಗ್ರಾಮದ ಚಿನ್ನಬಾಬು(27) ಮೃತ ಬೈಕ್ ಸವಾರ. ಘಟನೆಯಲ್ಲಿ ಆತನ ಪತ್ನಿ ಸುಮಿತ್ರಾ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೈಕ್ಗೆ ಬಸ್ ಡಿಕ್ಕಿ: ಪತ್ನಿ ಮುಂದೆಯೇ ಪ್ರಾಣ ಬಿಟ್ಟ ಪತಿ - ETV Bharath Kannada news
ಬಸ್ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಮುಂದೆಯೇ ಪತಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆಯಲ್ಲಿ ನಡೆದಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಸ್
ಅತ್ತೆ ಮಾವನನ್ನು ನೋಡಿಕೊಂಡು ಸ್ವಗ್ರಾಮಕ್ಕೆ ದಂಪತಿ ದ್ವಿಚಕ್ರ ವಾಹನದಲ್ಲಿ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಪತ್ನಿಯ ಮುಂದೆಯೇ ಪತಿ ಚಿನ್ನಬಾಬು ದಾರುಣವಾಗಿ ಸಾವನ್ನಪ್ಪಿದ್ದು ಹೃದಯವಿದ್ರಾವಕವಾಗಿತ್ತು. ಸದ್ಯ ಗಾಯಾಳು ಮಹಿಳೆಯನ್ನು ಗುಡಿಬಂಡೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಗುಡಿಬಂಡೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ :ಬೈಕ್ಗೆ ಬಸ್ ಡಿಕ್ಕಿ: ಸ್ಥಳದಲ್ಲೇ ತಂದೆ-ಮಗಳ ದಾರುಣ ಅಂತ್ಯ
Last Updated : Dec 16, 2022, 10:07 PM IST