ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಂಡೆ ಬಳಿಯ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ಕ್ರೂಸರ್ ವಾಹನ ಹಾಗೂ ಬೈಕ್ ನಡುವೆ ಬೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶುಭ ಕಾರ್ಯಕ್ಕೆ ಬಂದವರು ರಸ್ತೆ ಅಪಘಾತಕ್ಕೆ ಬಲಿಯಾದ್ರು - Bike Accident In Chikkaballapur
ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗುವ ವೇಳೆ ಆರ್ ಚೊಕ್ಕನಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಕ್ರೂಸರ್ ವಾಹನ ಹಾಗೂ ದ್ವಿಚಕ್ರವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
![ಶುಭ ಕಾರ್ಯಕ್ಕೆ ಬಂದವರು ರಸ್ತೆ ಅಪಘಾತಕ್ಕೆ ಬಲಿಯಾದ್ರು](https://etvbharatimages.akamaized.net/etvbharat/prod-images/768-512-4041157-thumbnail-3x2-kvn.jpg)
bike-accident-in-chikkaballapur
ಮೃತರು ಗುಡಿಬಂಡೆ ತಾಲೂಕಿನ ಮ್ಯಾಕಲಹಳ್ಳಿ ಗ್ರಾಮದ ಸಂಬಂಧಿಕರ ಮನೆಯಲ್ಲಿ ಶುಭ ಕಾರ್ಯವನ್ನು ಮುಗಿಸಿಕೊಂಡು ಹಿಂದಿರುಗುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಪೆರೇಸಂದ್ರ-ಗುಡಿಬಂಡೆಯ ರಸ್ತೆ ತಿರುವಿನಲ್ಲಿ ಕ್ರೂಸರ್ ಕಾರು ಮತ್ತು ದ್ವಿ-ಚಕ್ರವಾಹನಗಳು ಅತಿ ವೇಗವಾಗಿ ಬಂದಿದ್ದು ಮುಖಾ-ಮುಖಿ ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿದ್ದರು ಇಬ್ಬರು ಸಾವನ್ನಪ್ಪಿದ್ದಾರೆ.
ಯಲಹಂಕದ ಪುರುಷೋತ್ತಮ (30) ಮತ್ತು ಆತನ ಸ್ನೇಹಿತ(ಹೆಸರು ತಿಳಿದುಬಂದಿಲ್ಲ) ಎಂದು ಗುಡಿಬಂಡೆ ಪೊಲೀಸರು ತಿಳಿಸಿದ್ದಾರೆ.