ಕರ್ನಾಟಕ

karnataka

ETV Bharat / state

ರಸ್ತೆ ದಾಟುವ ವೇಳೆ ಲಾರಿ ಕೆಳಗೆ ಬಿದ್ದ ಭಿಕ್ಷುಕಿ, ನುಜ್ಜುನುಜ್ಜಾದ ಕಾಲು...! - Latest Accident News In Chikkaballapur

ಲಾರಿ ಚಕ್ರ ಹರಿದು ಮಹಿಳಾ ಭಿಕ್ಷುಕಿಯ ಕಾಲು ನುಜ್ಜುಗುಜ್ಜಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

ರಸ್ತೆ ದಾಟುವ ವೇಳೆ ಲಾರಿ ಕೆಳಗೆ ಬಿದ್ದ ಬಿಕ್ಷುಕಿ ನುಜ್ಜುನುಜ್ಜಾದ ಕಾಲು.
ರಸ್ತೆ ದಾಟುವ ವೇಳೆ ಲಾರಿ ಕೆಳಗೆ ಬಿದ್ದ ಬಿಕ್ಷುಕಿ ನುಜ್ಜುನುಜ್ಜಾದ ಕಾಲು.

By

Published : Nov 27, 2019, 3:31 AM IST

Updated : Nov 27, 2019, 3:53 AM IST

ಚಿಕ್ಕಬಳ್ಳಾಪುರ: ರಸ್ತೆ ದಾಟುತ್ತಿರುವಾಗ ಭಿಕ್ಷುಕಿ ಆಯತಪ್ಪಿ ಬಿದ್ದಿದ್ದು, ಈ ವೇಳೆ ಭಿಕ್ಷುಕಿ ಮೇಲೆ ಲಾರಿ ಚಕ್ರ ಹರಿದಿರುವ ಘಟನೆ ಶಿಡ್ಲಘಟ್ಟದ ಸಿವಿಲ್ ಬಸ್ ನಿಲ್ದಾಣದ ಬಳಿ ನಡೆದಿದೆ.

ರಸ್ತೆ ದಾಟುವ ವೇಳೆ ಲಾರಿ ಕೆಳಗೆ ಬಿದ್ದ ಭಿಕ್ಷುಕಿ

50 ವರ್ಷದ ಮಹಿಳೆ ಎಂದು ತಿಳಿದು ಬಂದಿದ್ದು, ಮಹಿಳೆ ನಗರದಲ್ಲಿ ಭಿಕ್ಷೆ ಬೇಡಿ ಜೀವನವನ್ನು ಸಾಗಿಸುತ್ತಿದ್ದಾಗಿ ತಿಳಿದು ಬಂದಿದೆ. ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿದೆ.

ಸದ್ಯ ಮಹಿಳೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆ ಶಿಡ್ಲಘಟ್ಟ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Last Updated : Nov 27, 2019, 3:53 AM IST

ABOUT THE AUTHOR

...view details