ಕರ್ನಾಟಕ

karnataka

ETV Bharat / state

ತಾನು ಓದಿದ ಶಾಲೆ ಮಕ್ಕಳ ಖರ್ಚು-ವೆಚ್ಚದ ಹೊಣೆ ಹೊತ್ತ ಶಶಿಕುಮಾರ್​​​​ - undefined

ಬಿಗ್​​​​​ಬಾಸ್​​​-6 ಖ್ಯಾತಿಯ ಶಶಿಕುಮಾರ್ ತಾವು ಚಿಕ್ಕಂದಿನಲ್ಲಿ ಓದಿದ ವಿವಿಎಸ್ ಶಾಲೆಯ ಸುಮಾರು 28 ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರಲಿದ್ದಾರೆ. ಈ ವಿಷಯವನ್ನು ಅವರು ತಮ್ಮ ಇನ್ಸ್​​​ಟಾಗ್ರಾಂನಲ್ಲಿ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ.

ತಾವು ಓದಿದ ಶಾಲೆ ಮಕ್ಕಳೊಂದಿಗೆ ಶಶಿಕುಮಾರ್​​

By

Published : Mar 28, 2019, 10:43 PM IST

ಕಳೆದ ಬಾರಿಯ ಬಿಗ್​ಬಾಸ್​​​​​​​​​ ವಿನ್ನರ್ ಶಶಿಕುಮಾರ್ ತಾವು ಓದಿದ ಶಾಲೆಯ 28 ವಿದ್ಯಾರ್ಥಿಗಳ ಓದಿನ ವೆಚ್ಚ ಭರಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಚಿಂತಾಮಣಿಯ ವಿ.ವಿ.ಎಸ್ ಶಾಲೆಯ 28 ವಿಧ್ಯಾರ್ಥಿಗಳನ್ನು ದತ್ತು ಪಡೆದು ಅವರ ಜವಾಬ್ದಾರಿಯ ಸಂಪೂರ್ಣ ಖರ್ಚುವೆಚ್ಚುಗಳನ್ನು ತಾವೇ ನಿಭಾಯಿಸಲಿದ್ದಾರೆ.

ಶಶಿಕುಮಾರ್ ಮೂಲತಃ ಚಿಂತಾಮಣಿಯ ಹುಡುಗ. ಆಡಿ ಓದಿ ಬೆಳೆದ ಊರಿನ ವಿ.ವಿ.ಎಸ್ ಶಾಲೆಯಲ್ಲಿರುವ 28 ಮಕ್ಕಳನ್ನು ದತ್ತು ಪಡೆದು ಅವರ ವಿಧ್ಯಾಭ್ಯಾಸ, ಯೂನಿಫಾರ್ಮ್ ಹಾಗೂ ಇನ್ನಿತರ ಖರ್ಚುಗಳ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ ಶಶಿಕುಮಾರ್​. ಭವಿಷ್ಯದಲ್ಲಿ ಇನ್ನೂ ಹೆಚ್ಚು ಮಕ್ಕಳನ್ನು ದತ್ತು ಪಡೆದು ಶಾಲೆಯ ಋಣ ತೀರಿಸಬೇಕು ಎಂಬುದು ಶಶಿ ಅವರ ಆಸೆಯಂತೆ.

ಮಾರ್ಡನ್ ರೈತ, ಬಿಗ್​​​​​​​​​​​ಬಾಸ್ ಸೀಸನ್ 6 ವಿನ್ನರ್ ಶಶಿ ಕುಮಾರ್, ತನ್ನ ಬಹುವರ್ಷಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಆ ನಂತರ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿನ್ನರ್ ಆದ ಶಶಿ ಈಗ ಸಿನಿಮಾ ಕ್ಷೇತ್ರದಲ್ಲೂ ಬ್ಯುಸಿ ಆಗಿದ್ದಾರೆ. ಕೆಲವೇ ದಿನಗಳಲ್ಲಿ ಅವರ ನಟನೆಯ ಚಿತ್ರವೊಂದು ಬಿಡುಗಡೆಯಾಗಲಿದೆ.

For All Latest Updates

TAGGED:

ABOUT THE AUTHOR

...view details