ಕರ್ನಾಟಕ

karnataka

ETV Bharat / state

ಚಿಕ್ಕಬಳ್ಳಾಪುರ ಪ್ರತಿಷ್ಠಿತ ಪಿವಿಆರ್ ಸ್ಕ್ಯಾನಿಂಗ್ ಸೆಂಟರ್ ಎಡವಟ್ಟು - ಚಿಕ್ಕಬಳ್ಳಾಪುರ ಡಿಹೆಚ್​ಓ ಮಹೇಶ್

ಎಲ್ಲದರ ಬಗ್ಗೆಯೂ ವಿವರಣೆ ನೀಡುವಂತೆ ಪಿಸಿಪಿಎನ್​ಡಿಟಿ ನಿಯಮಗಳ ಅಡಿಯಲ್ಲಿ ನೋಟಿಸ್​ ನೀಡುತ್ತೇವೆ. ಅವರು ನೀಡುವ ಉತ್ತರಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ ಟಿಹೆಚ್​ಓ ಮಂಜುಳಾ.

Chikkaballapur PVR Scanning Centre
ಚಿಕ್ಕಬಳ್ಳಾಪುರ ಪಿವಿಆರ್ ಸ್ಕ್ಯಾನಿಂಗ್ ಸೆಂಟರ್

By

Published : Jul 3, 2022, 10:54 AM IST

Updated : Jul 4, 2022, 10:05 AM IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದ ಡಯಾಗ್ನೋಸ್ಟಿಕ್ ಪಿವಿಆರ್ ಸ್ಕ್ಯಾನಿಂಗ್ ಸೆಂಟರ್ ನಡೆಸಲು ದೀಪಕ್​ ಎಂಬವರಿಗೆ ಚಿಕ್ಕಬಳ್ಳಾಪುರ ಡಿಹೆಚ್​ಓ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ. ಆದರೆ ಪಿಸಿಪಿಎನ್​ಡಿಟಿ (Pre-Conception and Pre-Natal Diagnostic Techniques Act) ನಿಯಮಗಳನ್ನು ಗಾಳಿಗೆ ತೂರಿ ವೆಂಕಟೇಶ್​ ಎಂಬ ನಕಲಿ ವೈದ್ಯರು ಸ್ಕ್ಯಾನಿಂಗ್​ ಸೆಂಟರ್​ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಹಿನ್ನೆಲೆಯಲ್ಲಿ ಡಿಹೆಚ್​ಓ ಮಹೇಶ್​ ಅವರ ಮಾರ್ಗದರ್ಶನದಂತೆ ಟಿಹೆಚ್​ಓ ಮಂಜುಳಾ ಅವರು ಸ್ಕ್ಯಾನಿಂಗ್​ ಸೆಂಟರ್‌ಗೆ ತೆರಳಿ ಪರಿಶೀಲಿಸಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ದೂರು ನೀಡಿದ್ದು, ಡಿಹೆಚ್​ಓ ಪರಿಶೀಲಿಸಲು ಹೇಳಿದ ಕಾರಣ ಬಂದು ಪರಿಶೀಲಿಸಿದ್ದೇನೆ. ನಾನು ಬಂದಾಗ ಸೆಂಟರ್​ ಖಾಲಿಯಾಗಿತ್ತು. ಸ್ಕ್ಯಾನಿಂಗ್​ ಮೆಶಿನ್​ ಡಾ.ದೀಪಕ್​ ಹೆಸರಲ್ಲಿದ್ದು, ಇಲ್ಲಿ ಬಂದಾಗ ಅವರಿರಲಿಲ್ಲ. ಅವರ ಬದಲಾಗಿ ಬೇರೆ ಡಾಕ್ಟರ್​ ಸ್ಕ್ಯಾನ್​ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಸ್ಕ್ಯಾನ್​ ಮಾಡಿರುವ ಎಲ್ಲಾ ರಿಪೋರ್ಟ್, ಸಾಕ್ಷ್ಯಗಳನ್ನು ಸಂಗ್ರಹಿಸಿ ನೋಡುತ್ತೇವೆ ಎಂದರು.

ಚಿಕ್ಕಬಳ್ಳಾಪುರ ಪ್ರತಿಷ್ಠಿತ ಪಿವಿಆರ್ ಸ್ಕ್ಯಾನಿಂಗ್ ಸೆಂಟರ್ ಎಡವಟ್ಟು

ರಿಸೆಪ್ಷನಿಸ್ಟ್​ ಹೇಳುವ ಪ್ರಕಾರ ಡಾ. ದೀಪಕ್​ ರಜೆಯಲ್ಲಿದ್ದು, ಡಾ. ವೆಂಕಟೇಶ್​ ಡ್ಯೂಟಿಯಲ್ಲಿದ್ದಾರೆ. ಆದರೆ ನಾವು ಬಂದಾಗ ಇಲ್ಲಿ ಯಾವ ಡಾಕ್ಟರ್​ ಕೂಡ ಇರಲಿಲ್ಲ. ಡಾ. ವೆಂಕಟೇಶ್​ ಅವರ ಹೆಸರು ಇಲ್ಲಿ ರಿಜಿಸ್ಟರ್​ ಆಗಿದೆಯಾ? ಆಗಿಲ್ಲ ಅಂದರೆ ಯಾಕೆ ಆಗಿಲ್ಲ, ರಿಜಿಸ್ಟರ್​ ಆಗದೆ ಅವರು ಇಲ್ಲಿ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆಯೂ ವಿವರಣೆ ನೀಡುವಂತೆ ಪಿಸಿಪಿಎನ್​ಡಿಟಿ ನಿಯಮಗಳ ಅಡಿಯಲ್ಲಿ ನೋಟಿಸ್​ ನೀಡುತ್ತೇವೆ. ಅವರು ನೀಡುವ ಉತ್ತರಗಳನ್ನು ಆಧರಿಸಿ ಅದರ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸಾರ್ವಜನಿಕರು ಡಾ. ವೆಂಕಟೇಶ್​ ಅವರು ಸ್ಕ್ಯಾನಿಂಗ್​ ಮಾಡಿ, ಸಹಿ ಹಾಕಿ ರಿಪೋರ್ಟ್​ ನೀಡಿದ್ದಾರೆ ಎಂದು ಹೇಳುತ್ತಿದ್ದಾರೆ. ಸಹಿ ಬಗ್ಗೆ ನಾವು ಪರೀಕ್ಷಿಸಬೇಕು. ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ :ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ

Last Updated : Jul 4, 2022, 10:05 AM IST

ABOUT THE AUTHOR

...view details