ಬಾಗೇಪಲ್ಲಿ:ವಿದ್ಯುತ್ ಕಂಬವನ್ನು ಏರಲು ಏಣಿ ಸಿಗದ ಕಾರಣ ಒಬ್ಬರ ಮೇಲೆ ಒಬ್ಬರು ನಿಂತುಕೊಂಡು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಮಸ್ಯೆ ಸರಿಪಡಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಬ್ಬರ ಮೇಲೊಬ್ಬರು ನಿಂತು ವಿದ್ಯುತ್ ಸಂಪರ್ಕ ದುರಸ್ಥಿ: ಬೆಸ್ಕಾಂ ಸಿಬ್ಬಂದಿ ಕರ್ತವ್ಯನಿಷ್ಠೆ - ಬಾಗೇಪಲ್ಲಿ ಸುದ್ದಿ
ವಿದ್ಯುತ್ ಕಂಬ ಏರಲು ಏಣಿ ಸಿಗದ ಕಾರಣ ಒಬ್ಬರ ಮೇಲೆ ಒಬ್ಬರು ನಿಂತುಕೊಂಡು ಕರ್ತವ್ಯ ನಿರ್ವಹಿಸಿದ ಅಪರೂಪದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
![ಒಬ್ಬರ ಮೇಲೊಬ್ಬರು ನಿಂತು ವಿದ್ಯುತ್ ಸಂಪರ್ಕ ದುರಸ್ಥಿ: ಬೆಸ್ಕಾಂ ಸಿಬ್ಬಂದಿ ಕರ್ತವ್ಯನಿಷ್ಠೆ Bescom staff photo goes viral on the social Media](https://etvbharatimages.akamaized.net/etvbharat/prod-images/768-512-9110358-419-9110358-1602234273786.jpg)
ಕರ್ತವ್ಯ ನಿಷ್ಠೆಗೆ ತನ್ನ ಹೆಗಲನ್ನೇ ಕೊಟ್ಟು ಬೆಸ್ಕಾಂ ಸಿಬ್ಬಂದಿ
ಪಟ್ಟಣದ ಬೆಸ್ಕಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ ಹಾಗೂ ಅನಿಲ್ ಕುಮಾರ್ ಚಿಗಾರಿ ತೋರಿದ ಕರ್ತವ್ಯನಿಷ್ಠೆ ಮೆಚ್ಚುಗೆ ಪಾತ್ರವಾಗಿದೆ.
ಪಟ್ಟಣದ 9ನೇ ವಾರ್ಡ್ನಲ್ಲಿ ಸಾರ್ವಜನಿಕರು ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದೆ ಎಂದು ಬೆಸ್ಕಾಂ ಕಚೇರಿಗೆ ಕರೆ ಮಾಡಿ ತಿಳಿಸಿದ್ದಾರೆ. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪರಶುರಾಮ ಮತ್ತು ಅನಿಲ್ ಕುಮಾರ್ ಚಿಗಾರಿ ಅವರಿಗೆ ವಿದ್ಯುತ್ ಕಂಬ ಏರಲು ಏಣಿ ಸಿಗಲಿಲ್ಲ. ಹೀಗಾಗಿ, ಕಂಪೌಂಡ್ ಗೋಡೆಯ ಮೇಲೆ ಒಬ್ಬರ ಮೇಲೆ ಒಬ್ಬರು ನಿಂತು ವಿದ್ಯುತ್ ಸಂಪರ್ಕದ ದುರಸ್ಥಿ ಕಾರ್ಯ ಮಾಡಿದ್ದಾರೆ. ಈ ಚಿತ್ರವನ್ನು ಸಾರ್ವಜನಿಕರು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.