ಕರ್ನಾಟಕ

karnataka

ETV Bharat / state

ನೈತಿಕತೆ ಇದ್ರೇ ಡಾ. ಸುಧಾಕರ್‌ ಪುಟಗೋಸಿ ಸ್ಥಾನಕ್ಕೆ ರಾಜೀನಾಮೆ ನೀಡಲಿ.. ಮಾಜಿ ಸಚಿವ ಶಿವಶಂಕರ್ ರೆಡ್ಡಿ - ಮಾಜಿ‌ಸ್ಪೀಕರ್ ರಮೇಶ್ ಕುಮಾರ್ ವಿರುದ್ದ ವಾಗ್ದಾಳಿ

ನೈತಿಕತೆ ಇದ್ದರೆ ತಮ್ಮ ಶಾಸಕರು ರಾಜೀನಾಮೆ ನೀಡಲಿ ಎಂದು ಮಾಜಿ ಸ್ಪೀಕರ್ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿಗೆ ನೇರ ಆರೋಪ ಮಾಡಿ ಸಾಕಷ್ಟು ಸದ್ದು ಮಾಡಿದ್ದರು. ಸದ್ಯ ಇಂದು ಗೌರಿಬಿದನೂರು ಶಾಸಕ ಸೇರಿದಂತೆ ಶಿಢ್ಲಘಟ್ಟ ಶಾಸಕ ವಿ ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಒಂದು ಕಡೆ ಸೇರಿ ಅನರ್ಹ ಶಾಸಕರ ವಿರುದ್ದ ಗುಡುಗಿದ್ದಾರೆ.

ಶಾಸಕರ ರಾಜೀನಾಮೆ

By

Published : Aug 5, 2019, 4:50 PM IST

ಚಿಕ್ಕಬಳ್ಳಾಪುರ:ಮೊನ್ನೆಯಷ್ಟೇ ಕಾಂಗ್ರೆಸ್‌ನ ಅನರ್ಹ ಶಾಸಕ ಡಾ. ಸುಧಾಕರ್, ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ ಹಾಗೂ ಮಾಜಿ ಸಚಿವರ ಶಿವಶಂಕರ್ ರೆಡ್ಡಿ ವಿರುದ್ದ ನೇರ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್‌ನ ಜಿಲ್ಲಾಮಟ್ಟದ ನಾಯಕರು ಒಂದೆಡೆ ಸೇರಿ ಸಭೆ ನಡೆಸಿದರು. ಅಷ್ಟೇ ಅಲ್ಲ, ಡಾ. ಸುಧಾಕರ್‌ ವಿರುದ್ಧ ಗುಡುಗಿದ್ದಾರೆ.

ಗೌರಿಬಿದನೂರು ಶಾಸಕ ಶಿವಶಂಕರ್‌ ರೆಡ್ಡಿ, ಶಿಢ್ಲಘಟ್ಟ ಎಂಎಲ್‌ಎ ವಿ. ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರ ಮಾಜಿ ಶಾಸಕರು ಇವತ್ತು ಸಭೆ ಸೇರಿ ಅನರ್ಹ ಶಾಸಕ ಡಾ. ಸುಧಾಕರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುಧಾಕರ್ ಎರಡು ಬಾರಿ ಗೆಲ್ಲಲು ಕಾಂಗ್ರೆಸ್‌ನ ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿದ್ದು, ಈಗ ಕೇವಲ ಸಚಿವ ಸ್ಥಾನ ಹಾಗೂ ಹಣದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ. ಇದು ಪಕ್ಷಕ್ಕೆ ಹಾಗೂ ಕ್ಷೇತ್ರದ ಜನತೆಗೆ ಸಾಕಷ್ಟು ಅನ್ಯಾಯ ಮಾಡಿದಂತೆ ಎಂದರು.

ಡಾ. ಸುಧಾಕರ್ ವಿರುದ್ಧ ಕಾಂಗ್ರೆಸ್‌ ನಾಯಕರಿಂದ ವಾಗ್ದಾಳಿ..

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಡಾ. ಸುಧಾಕರ್‌ ಯಾವೊಬ್ಬ ಕಾರ್ಯಕರ್ತರ ಒಂದು ಮಾತನ್ನೂ ಕೇಳಿಲ್ಲ. ರಾಜೀನಾಮೆಯ ಸ್ವಂತ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲಾ. ಈಗ ಸಂವಿಧಾನಕ್ಕೆ ಬದ್ದವಾಗಿ ನಡೆದುಕೊಳ್ಳುತ್ತಿರುವ ಮಾಜಿ‌ ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ನೈತಿಕತೆ ಬಗ್ಗೆ ಪ್ರಶ್ನಿಸುವುದು ಸರಿಯಲ್ಲ. ಸುಧಾಕರ್‌ಗೆ ನೈತಿಕತೆ ಇದ್ದರೆ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡಲಿ‌, 5 -6 ಬಾರಿ ಶಾಸಕರಾಗಿ ಗೆದ್ದಿದ್ದಾರೆ. ಆದರೆ, 2ನೇ ಬಾರಿಗೆ ಗೆದ್ದು ಸಚಿವ ಸ್ಥಾನಕ್ಕಾಗಿ ಈ ರೀತಿ ಮಾಡಿರುವುದು ಸರಿಯಲ್ಲ. ನೈತಿಕತೆ ಇದ್ದರೆ ರಾಜೀನಾಮೆ ನೀಡಲಿ, ಯಾರು ಕ್ರಷರ್‌ಗಳ, ಅಧಿಕಾರಿಗಳ ಬಳಿ ಹಣ ಪೀಕುತ್ತಿದಾರೆಂದು ಗೊತ್ತಿದೆ ಎಂದು ನೇರ ಶಾಸಕ ಶಿವಶಂಕರ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಮಾತನಾಡಿದ ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಕ್ಷೇತ್ರದ ಜವಾಬ್ದಾರಿಯನ್ನು ಜಿಲ್ಲೆಯ ಕೈನಾಯಕರು ಕೊಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಉತ್ತಮ ನಾಯಕನ ಆಯ್ಕೆಯ ಪ್ರಕ್ರಿಯೆ ನಡಿಯಲಿದ್ದು, ಅನರ್ಹ ಶಾಸಕನಿಗೆ ಬುದ್ದಿ ಕಲಿಸಬೇಕಿದೆ ಎಂದು ತಿಳಿಸಿದರು. ಮೊದಲ ಬಾರಿ ಸುಧಾಕರ್ ಶಾಸಕನಾಗಲು ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ಸಾಕಷ್ಟು ಶ್ರಮವಹಿಸಿದ್ದೇವೆ. ಆದರೆ, ನಂತರದ ಚುನಾವಣೆಯಲ್ಲಿ ಕೇವಲ ಹಣದಿಂದ ಮತಗಳನ್ನ ಪಡೆದು ಗೆದ್ದಿದ್ದಾರೆ. ಈಗ ಅಧಿಕಾರದ ಆಸೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details