ಬಾಗೇಪಲ್ಲಿ(ಚಿಕ್ಕಬಳ್ಳಾಪುರ): ನಿನ್ನೆ ಸುರಿದ ಮಳೆಗೆ ಪಟ್ಟಣದ ಪೊಲೀಸ್ ವಸತಿ ಗೃಹದಲ್ಲಿನ ಮೂರು ಅಂತಸ್ತಿನ ಮಹಡಿ ಮನೆಯ ಬಾಲ್ಕನಿ ಗೋಡೆ ಕುಸಿದಿದೆ. ಈ ಸಂಬಂಧ ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಭಾರಿ ಮಳೆಗೆ ಕುಸಿದು ಬಿದ್ದ ವಸತಿ ಗೃಹದಲ್ಲಿನ ಬಾಲ್ಕನಿ ಗೋಡೆ - heavy rain bagepalli
2007 ರಲ್ಲಿ ನಾಲ್ಕು ಬ್ಲಾಕ್‌ಗಳಲ್ಲಿ ಸುಮಾರು 20 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು,ಇವುಗಳನ್ನು ನಿರ್ಮಾಣ ಮಾಡಿದ 14 ವರ್ಷಗಳಲ್ಲೇ ಆರು ಮನೆಗಳು ಶಿಥಿಲಗೊಂಡಿವೆ. ಬಾಗೇಪಲ್ಲಿಯಲ್ಲಿ ಬುಧವಾರ ಸುರಿದ ಮಳೆಗೆ ವಸತಿಗೃಹದಲ್ಲಿನ ಬಾಲ್ಕನಿ ಗೋಡೆ ಬಿದ್ದಿದೆ.
2007 ರಲ್ಲಿ ನಾಲ್ಕು ಬ್ಲಾಕ್‌ಗಳಲ್ಲಿ ಸುಮಾರು 20 ಮನೆಗಳನ್ನು ನಿರ್ಮಾಣ ಮಾಡಲಾಗಿತ್ತು. ಈ ವಸತಿ ಗೃಹಗಳ ಪೈಕಿ ಆರು ಮನೆಗಳು ಸುಸ್ಥಿತಿಯಲ್ಲಿ ಇರಲಿಲ್ಲ. ಮಳೆ ಬಿದ್ದಾಗ ಎರಡು ಮತ್ತು ಮೂರನೇ ಮಹಡಿಯಲ್ಲಿನ ಮೇಲ್ಛಾವಣಿ ಸೋರುತ್ತಿತ್ತು. ಈ ಹಿನ್ನೆಲೆ ಸತತವಾಗಿ ಸೋರಿಕೆಯುಂಟಾದ ಕಾರಣದಿಂದ ಎರಡು ಮತ್ತು ಮೂರು ಅಂತಸ್ತಿನ ಮಹಡಿಯ ಬಾಲ್ಕನಿ ಗೋಡೆ ಕುಸಿದಿವೆ.
ಈ ವಸತಿ ಗೃಹಗಳಲ್ಲಿರುವ ಎಲ್ಲಾ ಕುಟುಂಬಗಳು ಈ ಸಂಬಂಧ ಖಾಲಿ ಮಾಡಿ ಬೇರೆ ಮನೆಯಲ್ಲಿ ವಾಸ ಮಾಡಲು ಮುಂದಾಗಿದ್ದಾರೆ. ಕೇವಲ 14 ವರ್ಷಗಳ ಹಿಂದೆಯಷ್ಷೇ ನಿರ್ಮಿಸಲಾಗಿದ್ದ ಕಟ್ಟಡಗಳು ಈಗಾಗಲೇ ಶಿಥಿಲಾವಸ್ಥೆ ತಲುಪಿರುವುದು ದುರಾದೃಷ್ಟಕರ.