ಬಾಗೇಪಲ್ಲಿ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ದೃಶ್ಯ ಮಾಧ್ಯಮದ ವರದಿಗಾರರು ಮತ್ತು ಕ್ಯಾಮರಾಮೆನ್‍ಗಳ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ಬಾಗೇಪಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಇಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಮಾಧ್ಯಮದವರ ಮೇಲೆ ಹಲ್ಲೆ: ಬಾಗೇಪಲ್ಲಿ ಪತ್ರಕರ್ತರ ಸಂಘದಿಂದ ಕ್ರಮಕ್ಕೆ ಮನವಿ - ಬೆಂಗಳೂರು ಗಲಭೆ ಲೆಟೆಸ್ಟ್ ನ್ಯೂಸ್
ಬೆಂಗಳೂರು ಗಲಭೆಯಲ್ಲಿ ಮಾಧ್ಯಮದವರ ಮೇಲಾಗಿರುವ ಹಲ್ಲೆಯನ್ನು ಬಾಗೇಪಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರು ಖಂಡಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
![ಮಾಧ್ಯಮದವರ ಮೇಲೆ ಹಲ್ಲೆ: ಬಾಗೇಪಲ್ಲಿ ಪತ್ರಕರ್ತರ ಸಂಘದಿಂದ ಕ್ರಮಕ್ಕೆ ಮನವಿ Bagepalli journalist committee](https://etvbharatimages.akamaized.net/etvbharat/prod-images/768-512-07:27:27:1597327047-kn-ckb-04-press-union-avb-kac10004-13082020191612-1308f-1597326372-349.jpg)
Bagepalli journalist committee
ಎಲ್ಲಾದರೂ ದೊಂಬಿ, ಗಲಭೆ, ಗಲಾಟೆಗಳು ನಡೆದಾಗ ಮಾಧ್ಯಮದವರು ಸ್ಥಳಕ್ಕೆ ತೆರಳಿ ನಿರ್ಭಯವಾಗಿ ವರದಿ ಮಾಡುವ ವಾತಾವರಣವೇ ಇಲ್ಲದಂತಾಗಿದೆ. ಮಾಧ್ಯಮದವರನ್ನು ಗುರಿಯಾಗಿಸಿಕೊಂಡು ವಿನಾಕಾರಣ ಹಲ್ಲೆ ನಡೆಸುತ್ತಿರುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸುವಂತೆ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಯನ್ನು ಒತ್ತಾಯಿಸಿದರು. ಜೊತೆಗೆ ಹಲ್ಲೆಗೊಳಗಾಗಿರುವ ಮಾಧ್ಯಮದವರಿಗೆ ಪರಿಹಾರ ನೀಡಿ ರಕ್ಷಣೆಗೆ ಮುಂದಾಗುವಂತೆಯೂ ತಿಳಿಸಿದರು.