ಕರ್ನಾಟಕ

karnataka

ETV Bharat / state

ನೆರೆಹಾನಿ ಪರಿಹಾರಕ್ಕೆ 10 ಸಾವಿರ ಕೋಟಿ ಬಿಡುಗಡೆ ಮಾಡಿ: ಬಚ್ಚೇಗೌಡ - chikballapura

ರಾಜ್ಯದಲ್ಲಿ ಅತಿವೃಷ್ಟಿಯಾಗಿ ಜನಸಾಮಾನ್ಯರು ತೊಂದರೆಯಲ್ಲಿದ್ದಾರೆ. ಆದ್ದರಿಂದ ರಾಜ್ಯಕ್ಕೆ 10 ಸಾವಿರ ಕೋಟಿ ಪರಿಹಾರ ಕೊಡಬೇಕೆಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಒತ್ತಾಯ ಮಾಡಿದ್ದಾರೆ.

ಸಂಸದ ಬಿಎನ್ ಬಚ್ಚೇಗೌಡ್ರು ಮಾತನಾಡಿದ್ದಾರೆ

By

Published : Aug 15, 2019, 6:42 PM IST

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಅತಿವೃಷ್ಟಿಯಾಗಿ ಜನಸಾಮಾನ್ಯರು ತೊಂದರೆಯಲ್ಲಿದ್ದಾರೆ. ಆದ್ದರಿಂದ ರಾಜ್ಯಕ್ಕೆ 10 ಸಾವಿರ ಕೋಟಿ ಪರಿಹಾರ ಕೊಡಬೇಕೆಂದು ಸಂಸದ ಬಿ.ಎನ್.ಬಚ್ಚೇಗೌಡ ಒತ್ತಾಯ ಮಾಡಿದ್ದಾರೆ.

ಅತಿವೃಷ್ಟಿಗೆ ಕೊಟ್ಟ ಮಹತ್ವವನ್ನು ಅನಾವೃಷ್ಟಿಗೂ ಕೊಡಬೇಕು. ಒಂದು ಕಡೆ ಮಳೆ ಬೆಳೆಯಿಲ್ಲದೆ ಬಯಲುಸೀಮೆ ಜಿಲ್ಲೆಗಳು ಬರಕ್ಕೆ ತುತ್ತಾಗಿವೆ. ಆದ್ದರಿಂದ ನಷ್ಟ ಪರಿಹಾರ ಕೊಡಬೇಕಾಗಿದೆ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು.

ಸಂಸದ ಬಿ.ಎನ್.ಬಚ್ಚೇಗೌಡ್ರ

ಮುಖ್ಯಮಂತ್ರಿ ಗಳು ಅತಿವೃಷ್ಟಿ ಪರಿಶೀಲನೆಯಲ್ಲಿ ಬ್ಯೂಸಿಯಾಗಿದ್ದಾರೆ. ಈಗಾಗಲೇ ಕೇಂದ್ರ ನಾಯಕರು ಭೇಟಿ ನೀಡಿ ಹೋಗಿದ್ದಾರೆ. ಇದರಿಂದ ಮಂತ್ರಿ ಮಂಡಲ ರಚನೆ ಮಾಡಲು ವಿಳಂಬವಾಗುತ್ತಿದೆ. ಆದಷ್ಟು ಬೇಗ ಮಂತ್ರಿ ಮಂಡಲ ರಚನೆಯಾಗಲಿದೆ ಎಂದರು.

ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ವರ್ಗಾವಣೆ ಕುರಿತು ಹೇಳಿಕೆ ನೀಡಿದ ಬಚ್ಚೇಗೌಡ್ರ, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಅನಿರುದ್ಧ್​ ಶ್ರವಣ್ ಅವರನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವೆ ಎಂದು ಹೇಳಿದರು.

ABOUT THE AUTHOR

...view details