ಕರ್ನಾಟಕ

karnataka

ETV Bharat / state

ಬೈಕ್​​-ಟಾಟಾ ಏಸ್​​​​ ನಡುವೆ ಡಿಕ್ಕಿ: ಅಯ್ಯಪ್ಪ ಮಾಲಾಧಾರಿ ಸ್ಥಳದಲ್ಲೇ ಸಾವು - Ayyappa bhakta death on the spot

ಗೌರಿಬಿದನೂರು ತಾಲೂಕಿನ ರಮಾಪುರ ಗ್ರಾಮದ ನಿವಾಸಿ ರಾಜೇಶ್ (27) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

chikkaballapura
ಬೈಕ್​, ಟಾಟಾಏಸಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಒಬ್ಬರು ಸಾವನ್ನಪ್ಪಿದ್ದಾರೆ.

By

Published : Dec 21, 2019, 1:05 PM IST

ಚಿಕ್ಕಬಳ್ಳಾಪುರ:ದ್ವಿಚಕ್ರ ವಾಹನ ಹಾಗೂ ಟಾಟಾ ಏಸ್​​​ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಅಯ್ಯಪ್ಪ ಮಾಲಾಧಾರಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮದುಗೆರೆ ಬಳಿ ನಡೆದಿದೆ. ತಾಲೂಕಿನ ರಮಾಪುರ ಗ್ರಾಮದ ನಿವಾಸಿ ರಾಜೇಶ್ (27) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

ಮದುಗೆರೆ ಬಳಿ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಗಮನಿಸದ ಟಾಟಾ ಏಸ್​​ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸೇತುವೆಯಿಂದ ಹಳ್ಳಕ್ಕೆ ಬಿದ್ದಿದೆ. ಇನ್ನು ದ್ವಿಚಕ್ರ ವಾಹನ ಸವಾರ ಅಯ್ಯಪ್ಪ ಮಾಲಾಧಾರಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ನಡೆದಿದೆ.

ABOUT THE AUTHOR

...view details