ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಸಿರು ವಲಯದಲ್ಲಿದ್ದ ಚಿಂತಾಮಣಿ ನಗರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಓಡಾಟವನ್ನು ನಿಯಂತ್ರಿಸಲು ಡ್ರೋನ್ ಕ್ಯಾಮೆರಾಗೆ ಧ್ವನಿವರ್ಧಕಗಳನ್ನು ಬಳಕೆ ಮಾಡಿ ಸಂದೇಶ ರವಾನಿಸಲಾಗುತ್ತಿದೆ.
ಚಿಂತಾಮಣಿಯಲ್ಲಿ ವಿಶಿಷ್ಟ ಪ್ರಯೋಗ: ಡ್ರೋನ್‌ಗೆ ಮೈಕ್ ಅಳವಡಿಸಿ ಕೊರೊನಾ ಜಾಗೃತಿ - Chikkaballapura latest news
ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ಪೊಲೀಸರು ಡ್ರೋನ್‌ಗೆ ಮೈಕ್ ಅಳವಡಿಸುವ ಮೂಲಕ ವಿಭಿನ್ನವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.
ಡ್ರೋನ್‌ಗೆ ಮೈಕ್ ಅಳವಡಿಕೆ
ಚಿಂತಾಮಣಿ ನಗರದಲ್ಲಿ ಮೂವರು ಕೊರೊನಾ ಸೋಂಕಿತರು ಕಂಡು ಬಂದಿದ್ದು, ನಗರದ 3 ವಾರ್ಡ್ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಇನ್ನುಳಿದ ವಾರ್ಡ್ಗಳನ್ನು ಲಾಕ್ಡೌನ್ ಮಾಡಿ ಪೊಲೀಸರು ಪ್ರಚಾರ ಕಾರ್ಯಕ್ಕೆ ಡ್ರೋನ್ ಹಾಗೂ ಅದರಲ್ಲೇ ಮೈಕ್ ಬಳಕೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಡ್ರೋನ್ ಮೂಲಕ ನಗರದಲ್ಲಿರುವ ಪ್ರದೇಶಗಳ ಮೇಲೆ ನಿಗಾವಹಿಸಲು ಬಳಸುತ್ತಾರೆ. ಆದರೆ, ಚಿಂತಾಮಣಿ ನಗರದ ಪೊಲೀಸರು ಡ್ರೋನ್‌ಗೆ ಧ್ವನಿವರ್ಧಕ ಅಳವಡಿಸಿ ಜಾಗೃತಿ ಮೂಡಿಸುತ್ತಿರುವುದು ವಿಶೇಷ.