ಚಿಕ್ಕಬಳ್ಳಾಪುರ:ಶಿಡ್ಲಘಟ್ಟದ ಅಶೋಕ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಬೀಗ ಮುರಿದು ದರೋಡೆಗೆ ಯತ್ನಿಸಿರುವ ಘಟನೆ ನಡೆದಿದೆ.
ಶಿಡ್ಲಘಟ್ಟದಲ್ಲಿ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ - ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಎಸ್‌ಬಿಐ ಎಟಿಎಂ ಕಳ್ಳತನಕ್ಕೆ ಯತ್ನ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಶಿಡ್ಲಘಟ್ಟದ ಅಶೋಕ ರಸ್ತೆ ಬಳಿ ತಡರಾತ್ರಿ ನಡೆದಿದೆ.

ಎಟಿಎಂ ಶೆಟ್ಟರ್ ಮುಚ್ಚಿರುವುದನ್ನು ಗಮನಿಸಿದ ದರೋಡೆಕೋರರು, ಮೂದಲು ಬೀದಿ ದೀಪಗಳನ್ನು ಆರಿಸಿದ ನಂತರ ಬೀಗ ಮುರಿದು ಒಳ ಹೋಗಿ ಎಟಿಎಂನಲ್ಲಿದ್ದ ಹಣವನ್ನು ಎಗರಿಸಲು ಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಬೀಗ ಮುರಿಯುವ ಸಂದರ್ಭದಲ್ಲಿ ಗಾಯ ಮಾಡಿಕೊಂಡಿದ್ದು, ರಕ್ತದ ಕಲೆಗಳು ರೋಲಿಂಗ್ ಶೆಟ್ಟರ್ ಮೇಲೆ ಮೂಡಿರುವುದು ಕಂಡು ಬಂದಿದೆ.
ಶನಿವಾರ ಬೆಳಗ್ಗೆ ಎಟಿಎಂ ಬಾಗಿಲು ತೆಗೆಯಲು ಆಗಮಿಸಿದ ಸೆಕ್ಯೂರಿಟಿ, ಮೊದಲು ಬೀಗ ತೆಗೆಯಲು ಯತ್ನಿಸಿದ ವೇಳೆ ಬೀಗ ಮುರಿದಿರುವುದು ಗೊತ್ತಾಗಿದೆ. ಬಳಿಕ ಬ್ಯಾಂಕ್ ವ್ಯವಸ್ಥಾಪಕ ಶಶಿ ಕುಮಾರ್‌ಗೆ ಸುದ್ದಿ ಮುಟ್ಟಿಸಿದ್ದಾರೆ. ಶಶಿಕುಮಾರ್ ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿ ನೋಡಿದಾಗ, ಎಟಿಎಂನ ಶೆಟ್ಟರ್ ಹೊಡೆದಿರುವುದು ಗೊತ್ತಾಗಿದೆ. ಹಣ ಕಳ್ಳತನವಾಗಿಲ್ಲ ಎಂದು ಬ್ಯಾಂಕ್ ಮ್ಯಾನೇಜರ್ ಶಶಿಕುಮಾರ್ ಹೇಳಿದ್ದಾರೆ. ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.