ಕರ್ನಾಟಕ

karnataka

ETV Bharat / state

ದಾರಿ ಬಿಡುವ ವಿಚಾರಕ್ಕೆ ಕಿತ್ತಾಟ: ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ - ಕಂಡಕ್ಟರ್​

ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿಯಲ್ಲಿ ದಾರಿ ಬಿಡುವ ವಿಚಾರವಾಗಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ ನಡೆಸಲಾಗಿದೆ

ಗೌರಿಬಿದನೂರಿನಲ್ಲಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ

By

Published : Mar 5, 2019, 10:33 PM IST

Updated : Mar 5, 2019, 11:24 PM IST

ಚಿಕ್ಕಬಳ್ಳಾಪುರ: ದಾರಿ ಬಿಡುವ ವಿಚಾರದಲ್ಲಿ ಗಲಾಟೆ ನಡೆದು ಉದ್ರಿಕ್ತರು ಕೆಎಸ್ಆರ್​ಟಿಸಿ ಬಸ್​ ಚಾಲಕ ಮತ್ತು ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗೌರಿಬಿದನೂರು ತಾಲ್ಲೂಕಿನ ಬಿಸಿಲಹಳ್ಳಿ ಬಳಿ ನಡೆದಿದೆ.

ಗೌರಿಬಿದನೂರಿನಲ್ಲಿ ಕೆಎಸ್​ಆರ್​ಟಿಸಿ ಡ್ರೈವರ್​, ಕಂಡಕ್ಟರ್​ ಮೇಲೆ ಹಲ್ಲೆ

ಘಟನೆಯಲ್ಲಿ ಬಸ್ ಚಾಲಕ ಅಶ್ವತ್ಥರೆಡ್ಡಿ(28), ನಿರ್ವಾಹಕ ಮಂಜುನಾಥ್ (29) ಹಾಗೂ ನಾಗೇಶ್ (26) ಎಂಬುವರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದವರನ್ನು ಸ್ಥಳೀಯರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಆನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಏನಾಯ್ತು?

ಚಿಕ್ಕಬಳ್ಳಾಪುರ ಕಡೆಯಿಂದ ಕೆಎಸ್ಆರ್​ಟಿಸಿ ಬಸ್​ಗೆ ಗೌರಿಬಿದನೂರು ಕಡೆಯಿಂದ AP03S7273 ಹಾಗೂ AP27AN1026 ನಂಬರಿನ ಇಂಡಿಕಾ ಕಾರ್​ಗಳು ಎದುರಾಗಿವೆ. ಸೇತುವೆ ಕಿರಿದಾಗಿದ್ದ ಕಾರಣ ದಾರಿ ಬಿಡುವ ವಿಚಾರದಲ್ಲಿ ಗಲಾಟೆಯಾಗಿದೆ. ಜಗಳ ತಾರಕಕ್ಕೇರಿ ಕಾರಿನಲ್ಲಿದ್ದವರು ಕೆಎಸ್ಆರ್​ಟಿಸಿ ಬಸ್​ ಚಾಲಕನನ್ನು ಬಸ್ಸಿನಿಂದ ಕೆಳಗಿಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಚಾಲಕನ ರಕ್ಷಣೆಗೆ ಬಂದ ಕಂಡಕ್ಟರ್​ ಸೇರಿ ಮತ್ತೆ ಕೆಲವರ ಮೇಲೂ ರಕ್ತ ಬರುವಂತೆ ಹಲ್ಲೆ ನಡೆಸಿದರು ಎಂದು ತಿಳಿದುಬಂದಿದೆ.

ವಿಚಾರ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಮಂಚೇನಹಳ್ಳಿ ಪಿಎಸ್​ಐ ಭಾಸ್ಕರ್ ಮತ್ತು ಸಿಬ್ಬಂದಿ, ಆರೋಪಿಗಳಾದ ಇನಾಯತ್ ,ಸಲ್ಮಾನ್, ಇಮ್ರಾನ್, ಉಮರ್ ಎಂಬುವವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂದ ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.

Last Updated : Mar 5, 2019, 11:24 PM IST

ABOUT THE AUTHOR

...view details