ಕರ್ನಾಟಕ

karnataka

ಕೊರೊನಾ ನಿಯಮ ಮೀರಿ ವ್ಯಾಪಾರ: ಪ್ರಶ್ನಿಸಿದ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

By

Published : Jun 6, 2021, 4:43 PM IST

ಲಾಕ್​ಡೌನ್​ ಸಮಯದಲ್ಲಿ ಅಂಗಡಿ ತೆರೆದು ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್​ ಧರಿಸದೇ ವ್ಯಾಪಾರ ಮಾಡುತ್ತಿದ್ದಾಗ ಪ್ರಶ್ನಿಸಿದ ಆಶಾ ಕಾರ್ಯಕರ್ತೆ ಮೇಲೆ ಇಬ್ಬರು ಹಲ್ಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.

attack on Asha activist in chikkaballapura
ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ:ಲಾಕ್​ಡೌನ್‌ನಲ್ಲಿ ಅಂಗಡಿ ತೆರೆದು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ ಆಶಾ ಕಾರ್ಯಕರ್ತೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ತಿಪ್ಪಗಾನಹಳ್ಳಿಯಲ್ಲಿ ನಡೆದಿದೆ.

ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ

ತಿಪ್ಪಗಾನಹಳ್ಳಿ ಗ್ರಾಮದಲ್ಲಿ ಲಾಕ್​ಡೌನ್​ ನಿಯಮ ಮೀರಿ ರಾಮಲಿಂಗ ಎಂಬಾತ ವ್ಯಾಪಾರ ಮಾಡುತ್ತಿದ್ದ. ಸಾಮಾಜಿಕ ಅಂತರ ಕಾಪಾಡುಕೋಳ್ಳದೆ ವ್ಯಾಪಾರದಲ್ಲಿ ತೊಡಗಿದ್ದನ್ನು ಕಂಡ ಸುಮತಿ ಎಂಬ ಆಶಾ ಕಾರ್ಯಕರ್ತೆ ಲಾಕ್​ಡೌನ್ ಸಮಯದಲ್ಲಿ ಏಕೆ ಅಂಗಡಿ ತೆರೆಯುತ್ತಿರಾ, ನೀವು ಮಾಸ್ಕ್ ಕೂಡ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದರಿಂದ ರೊಚ್ಚಿಗೆದ್ದ ಅಂಗಡಿ ಮಾಲೀಕ ರಾಮಲಿಂಗ ಹಾಗೂ ಆನಂದ್​ ಎಂಬುವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಆಶಾ ಕಾರ್ಯಕರ್ತೆ ತಲೆ ಮತ್ತು ಎದೆ ಭಾಗಕ್ಕೆ ಹಲ್ಲೆ ಮಾಡಿ ಅಮಾನೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪವಿದೆ. ಹಲ್ಲೆಗೊಳಗಾದ ಸುಮತಿ ಸ್ಥಿತಿ ಚಿಂತಾಜನಕವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದೊಡ್ಡಬಳ್ಳಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಪ್ರಜಾ ಪೀಡಕ ಸರ್ಕಾರ ತೈಲ ಬೆಲೆ ಏರಿಸಿ ಜನರ ಬದುಕು ನಾಶ ಮಾಡುತ್ತಿದೆ : ಕಾಂಗ್ರೆಸ್​

For All Latest Updates

ABOUT THE AUTHOR

...view details